ನಟ 'ನಾಗಾರ್ಜುನ'ಗೆ ಗೋವಾ ಸರ್ಕಾರದಿಂದ 'ನೋಟೀಸ್' ಜಾರಿ

ಟಾಲಿವುಡ್ ಸೀನಿಯರ್ ನಟ ನಾಗಾರ್ಜುನಗೆ ಗೋವಾ ಸರ್ಕಾರ ಬಿಗ್ ಶಾಕ್ ನೀಡಿದ್ದು, ಅಕ್ರಮ ಕಟ್ಟದ ನಿರ್ಮಾಣಗಳ ಆರೋಪದ ಮೇಲೆ ನೋಟಿಸ್ ಜಾರಿ ಮಾಡಿದೆ. ಇತ್ತೀಚಿಗಷ್ಟೇ ತೆಲಂಗಾಣ ಸರ್ಕಾರ ರೈತರಿಗೆ ನೀಡುತ್ತಿರುವ ರೈತ ಬಂಧು ಯೋಜನೆಯಿಂದ ನಾಗಾರ್ಜನ ಕುಟುಂಬ ಲಾಭ ಪಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದಿತ್ತು. ಈ ವಿಷಯ ಮರೆಯುವ ಮುನ್ನವೇ ಗೋವಾ ರಾಜ್ಯದ ಗ್ರಾಮ ಪಂಚಾಯಿತಿಯೊಂದು ನಾಗಾರ್ಜುನ ಅವರಿಗೆ ಅಕ್ರಮ ಕಟ್ಟದ ನಿರ್ಮಾಣಗಳ ಆರೋಪದ ಮೇಲೆ ನೋಟಿಸ್ ಜಾರಿ ಮಾಡಿದೆ.