ಸಂಗೀತ ಲೋಕದ ಜೀವಂತ ದಂತಕಥೆ ಕೆ.ಜೆ ಯೇಸುದಾಸ್ ಹುಟ್ಟುಹಬ್ಬ
ಕರ್ನಾಟಕ ಸಂಗೀತ ಲೋಕದ ಜೀವಂತ ದಂತಕಥೆ, ಹಿರಿಯ ಗಾಯಕ ಕೆ.ಜೆ ಯೇಸುದಾಸ್ ಅವರನ್ನು ಕೇರಳಿಗರು ಆರಾಧ್ಯ ದೈವದಂತೆ ಕಾಣುತ್ತಾರೆ. ಕಳೆದ 5 ದಶಕಗಳಲ್ಲಿ ಸಂಗೀತ ಲೋಕದಲ್ಲಿ ಅಚ್ಚಳಿಯದ ಸಾಧನೆಗೈದ ಅದ್ಭುತ ಗಾಯಕ ಯೇಸುದಾಸ್ ಅವರ 83ನೇ ಜನ್ಮದಿನ ಇಂದು. ಕನ್ನಡದ ಹಲವಾರು ಹಾಡುಗಳಿಗೆ ತಮ್ಮ ಕಂಠದ ಮೂಲಕ ಜೀವ ತುಂಬಿದ ಯೇಸುದಾಸ್ ಅವರು ಕರುನಾಡಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅನೇಕ ಸೂಪರ್ ಹಿಟ್ ಹಾಡುಗಳನ್ನು ಅವರು ನೀಡಿದ್ದಾರೆ.