ಮುಂದಿನ ಚುನಾವಣೆಯಲ್ಲಿ ಯಾರಿಗೆ ಕಿರೀಟ? ಡಾ. ಯಶ್ವಂತ್ ಗುರೂಜಿ ಭವಿಷ್ಯ!

ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ಮೂರು ಪ್ರಬಲ ಪಕ್ಷಗಳು ಸಾಧ್ಯವಿರುವಷ್ಟು ಕ್ಷೇತ್ರಗಳನ್ನು ಬಾಚಿಕೊಳ್ಳಲು ಇನ್ನಿಲ್ಲದ ತಂತ್ರಗಳನ್ನು ಮಾಡುತ್ತಿವೆ. ಈ ನಡುವೆ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ ಎನ್ನುವ ಲೆಕ್ಕಾಚಾರಗಳು ಶುರುವಾಗಿವೆ.
ಕಾಲಜ್ಞಾನದ ಭವಿಷ್ಯವಾಣಿಯ ಪ್ರಕಾರ, ಪುರಾತನ ತಾಳೆಗರಿಯ ಭವಿಷ್ಯವಾಣಿಯ ಪ್ರಕಾರ, ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಪಕ್ಷ ಯಾವುದೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, 'ಈ ಹಿಂದೆ ರಾಜ ಗದ್ದಿಗೆ ನಷ್ಟ ಎಂಬ ಭವಿಷ್ಯವಾಣಿಯನ್ನು ನಾವು ಇದೇ ಕ್ಷೇತ್ರದಲ್ಲಿ ನುಡಿದಿದ್ದೆವು. ಆಗ ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪನವರು ಅಂದು ಪದತ್ಯಾಗವನ್ನು ಮಾಡಿದರು. ಅದೇ ರೀತಿ ಮುಂದಿನ ರಾಜಕೀಯ ಭವಿಷ್ಯವನ್ನು ಹೇಳುವುದಾದರೆ ಈ ರಾಜ್ಯ ರಾಜಕಾರಣದಲ್ಲಿ ಸ್ತ್ರೀಯಿಂದ ಕಂಠಕಗಳು ಬಾಧಿಸುತ್ತದೆ. ಅದೇ ರೀತಿ ಈ ರಾಜ್ಯದಲ್ಲಿ ಯಾರು ಅಧಿಕಾರವನ್ನು ಮಾಡುತ್ತಾರೆ ಎಂದು ಹೇಳುವುದಾದರೆ- ಮೂರು ಪಕ್ಷಗಳ ಪೈಕಿ ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬರುತ್ತದೆ. ಯುಗಾದಿಯ ನಂತರ ರಾಜ ಗದ್ದುಗೆಯನ್ನು ಕಾಂಗ್ರೆಸ್ ಏರಲಿದೆ. ಯೋಗ್ಯವಾಗಿರುವ ರಾಜ ರಾಜ್ಯವನ್ನು ಆಳುತ್ತಾನೆ. ಜೊತೆಗೆ ನಮ್ಮ ರಾಜ್ಯವನ್ನು ಇನ್ನೂ ಉನ್ನತ ಸ್ಥಾನಮಾನಕ್ಕೆ ತರುತ್ತಾನೆ. ಅವರಿಗೆ ರಾಜ ಗದ್ದುಗೆಯ ಯೋಗ ಇದೆ' ಎಂದಿದ್ದಾರೆ.
ಇನ್ನೂ ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಗುರೂಜಿ, 'ಅದಕ್ಕಾಗಿ ಜಾತಕವನ್ನು ನೋಡಬೇಕಾಗುತ್ತದೆ. ಜಾತಕದಲ್ಲಿ ಯಾರಿಗೆ ರಾಜನಾಗುವ ಯೋಗವಿದೆ ಎನ್ನುವುದನ್ನು ನೋಡಬೇಕಾಗುತ್ತದೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೇ ಅನ್ನೋದರಲ್ಲಿ ನೂರಕ್ಕೆ ನೂರರಷ್ಟು ಅನುಮಾನವೇ ಇಲ್ಲ. ನಾವು ಹೇಳಿರುವ ಭವಿಷ್ಯ ಇಂದಿಗೂ ಕೂಡ ಸುಳ್ಳಾಗಿಲ್ಲ. ಮುಂದು ಕೂಡ ಸುಳ್ಳಾಗುವುದಿಲ್ಲ' ಎಂದು ಖಡಾಖಂಡಿತಾವಾಗಿ ಹೇಳಿದರು.
'ಬಿಎಸ್ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯುತ್ತಾರೆ ಎಂದು ನಾವು ಇದೇ ಪುಣ್ಯ ಕ್ಷೇತ್ರದಲ್ಲಿ ಹೇಳಿದ್ದೆವು. ಅದು ನಿಜವಾಗಿದೆ. ಇದು ಕೂಡ ನಿಜವಾಗಲಿದೆ. ಶನೇಶ್ವರನ ಅನುಗ್ರಹದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಉತ್ತಮವಾದ ರಾಜಕಾರಣಿ ಈ ರಾಜ್ಯವನ್ನು ಆಳುತ್ತಾನೆ' ಎಂದು ಹೇಳಿದರು. ಹಿಂದೊಮ್ಮೆಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ- ಕೋಡಿಶ್ರೀ
ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ. ಇದಕ್ಕೂ ಮುನ್ನ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವಿತ್ತು. ಆದರೆ ಮೈತ್ರಿ ಸರ್ಕಾರ ಕೆಡವುದರ ಮೂಲಕ ಬಿಜೆಪಿ ಅಧಿಕಾರ ಪಡೆದುಕೊಂಡಿದೆ ಎನ್ನುವ ಕಿಚ್ಚು ಈ ಬಾರಿ ಹೊತ್ತಿ ಉರಿಯುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡೆಎಸ್ ಮೂರು ಪ್ರಬಲ ಪಕ್ಷಗಳ ನಡುವೆ ಭಾರೀ ಪೈಪೋಟಿ ನಡೆಯಲಿದೆ. ಈ ನಡುವೆ ಕೋಡಿಶ್ರೀಗಳು ನುಡಿದ ಭವಿಷ್ಯ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ.
ಕೋಡಿ ಶ್ರೀ ಹೇಳಿರುವ 'ಒಂದೇ ಪಕ್ಷ' ಡಾ. ಯಶ್ವಂತ್ ಗುರೂಜಿ ಹೇಳಿದ ಕಾಂಗ್ರೆಸ್ ಆಗಿರಬಹುದಾ ಎನ್ನುವ ಅನುಮಾನವೂ ಇದೆ. ಈ ಪ್ರಶ್ನೆಗೆ ನಿಖರವಾದ ಉತ್ತರ ಚುನಾವಣೆ ಬಳಿಕವಷ್ಟೇ ತಿಳಿದುಬರಲಿದೆ.