500 ರೂ.ಗಳಿಗೆ ಗ್ಯಾಸ್ ಸಿಲಿಂಡರ್: ದೇಶದ ಜನತೆಗೆ ರಾಹುಲ್ ಗಾಂಧಿ ಪತ್ರ

ನವದೆಹಲಿ: ಕೇವಲ 500 ರೂ.ಗಳಿಗೆ ಗ್ಯಾಸ್ ಸಿಲಿಂಡರ್, ಅಗ್ಗವಾದ ಬೆಲೆಗೆ ಪೆಟ್ರೋಲ್, ಡೀಸೆಲ್, ಉದ್ಯೋಗ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಈ ಸಂಬಂಧ ಅವರು ದೇಶದ ಜನತೆಗೆ ಪತ್ರ ಬರೆದಿದ್ದಾರೆ. ನಿಮ್ಮೆಲ್ಲಾ ಸಮಸ್ಯೆಗಳನ್ನು ನಾನು ಆಲಿಸಿದ್ದೇನೆ. ಆಆದಾಯ ಕುಸಿತ, ಕನಸು ಛಿದ್ರದಂತಹ ನೋವಿನಲ್ಲಿ ದೇಶದ ಜನರಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ನಿರ್ನಾಮ ಮಾಡಲು ಬೀದಿಗಿಳಿದು ಸಂಸತ್ತಿನವರೆಗೆ ಪ್ರತಿದಿನ ಹೋರಾಡುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.