ಸರ್ವಜ್ಞರ ಅಭಿವೃದ್ಧಿ ಪ್ರಾಧಿಕಾರಕ್ಕೆಆಯುಕ್ತರ ನೇಮಕಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸಿಎಂಗೆ ಮನವಿ | Hirekerur |

ಹಿರೇಕೆರೂರ ರಟ್ಟಿಹಳ್ಳಿ ಅವಳಿ ತಾಲೂಕುಗಳಿಂದ ಸರ್ವಜ್ಞರ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಯುಕ್ತರನ್ನ ನೆಮಿಸಿ ಸರ್ವಜ್ಞರ ಸಮಾದಿ ಅಭಿವೃದ್ಧಿ ಗೊಳಿಸಬೇಕು. ಚಿಕ್ಕೇರೂರು ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಬೇಕು. ಕೃಷಿ ಇಲಾಖೆಯ ಕಚೇರಿ ಹಾಗೂ ಕೆ.ಇ. ಬಿ.ಸೆಕ್ಷನ್ ಆಫೀಸ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಣ್ಣ ) ತಾಲೂಕು ಘಟಕದ ವತಿಯಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮಂಜುನಾಥ ಓಲೆಕಾರ, ತಾಲೂಕ ಅಧ್ಯಕ್ಷರಾದ ಭರ್ಮಪ್ಪ ಡಮ್ಮಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಲ್ಲಪ್ಪ ಮರಾಠೆ, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷರಾದ ಯೂಸುಫ್ ಸೈಕಲ್ಗಾರ ಹಂಸಬಾವಿ, ಹೋಬಳಿ ಘಟಕದ ಅಧ್ಯಕ್ಷರಾದ ರಾಜು ಬಳ್ಳಾರಿ, ಚಿಕ್ಕೇರೂರು ಗ್ರಾಮದ ಅಧ್ಯಕ್ಷರಾದ ಜಮೀರ್ ಚಿಕ್ಕೂಣತಿ, ಕರವೇ ರೈತ ಘಟಕದ ಅಧ್ಯಕ್ಷರಾದ ಸೋಮು ಕುರುಬರ ಉಪಸ್ಥಿತರಿದ್ದರು