ಬೆಂಗಳೂರಿನಲ್ಲಿ ಮಹಿಳೆ ಜೊತೆ ಅಸಭ್ಯ ವರ್ತನೆ,ಲೈಂಗಿಕ ದೌರ್ಜನ್ಯ: ಆರೋಪಿ ಅರೆಸ್ಟ್‌

ಬೆಂಗಳೂರಿನಲ್ಲಿ ಮಹಿಳೆ ಜೊತೆ ಅಸಭ್ಯ ವರ್ತನೆ,ಲೈಂಗಿಕ ದೌರ್ಜನ್ಯ: ಆರೋಪಿ ಅರೆಸ್ಟ್‌

ಬೆಂಗಳೂರು: ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಸುಬ್ರಹ್ಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ.
ಸತೀಶ್‌ ಬಂಧಿತ ಆರೋಪಿ.ನಿನ್ನೆ ಒರಾಯನ್ ಮಾಲ್ ಬಳಿಗೆ ಕರೆದಿದ್ದ ಆರೋಪಿ ಸತೀಶ್, ಈ ವೇಳೆ ಮಹಿಳೆಯ ಜೊತೆ ಅಸಭ್ಯ ವರ್ತಿಸಿ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎನ್ನಲಾಗಿತ್ತು.

ಈ ಬಗ್ಗೆ ಸಂತ್ರಸ್ತ ಮಹಿಳೆ ಸುಬ್ರಹ್ಮಣ್ಯ ನಗರ ಠಾಣೆಗೆ ಮೆಟ್ಟಿಲೇರಿ ಮಹಿಳೆಯ ಕೆಲ ಫೋಟೋ, ವಿಡಿಯೋಗಳು ಆರೋಪಿ ಮೊಬೈಲ್​ನಲ್ಲಿ ಇದೆ. ಅದನ್ನ ಡಿಲೀಟ್ ಮಾಡಿಸುವಂತೆ ಜೊತೆಗೆ ನನ್ನ ಬಳಿ ಚಿನ್ನ, ಹಣ ಪಡೆದಿದ್ದು ವಾಪಸ್​ ಕೊಡಿಸುವಂತೆ ದೂರು ನೀಡಿದ್ದಾಳೆ. ಈ ದೂರಿನ ಅನ್ವಯ ಆರೋಪಿ ಸತೀಶ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.