ಕಾಂಗ್ರೆಸ್​ ನಾಯಕರಿಗೆ ಕಿವಿಗೆ ಹೂ ಮುಡಿಯುವ ಐಡಿಯಾ ಕೊಟ್ಟಿದ್ದೇ ಈತ!

ಕಾಂಗ್ರೆಸ್​ ನಾಯಕರಿಗೆ ಕಿವಿಗೆ ಹೂ ಮುಡಿಯುವ ಐಡಿಯಾ ಕೊಟ್ಟಿದ್ದೇ ಈತ!

ಬೆಂಗಳೂರು: ನಿನ್ನೆ ಬಜೆಟ್ ಹಿನ್ನಲೆಯಲ್ಲಿ ಕೈ ಮುಖಂಡರು ಕಿವಿಗೆ ಹೂ ಮುಡಿದುಕೊಂಡು ಬಂದಿದ್ದರು. ಈ ಪ್ರಸಂಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಅದಷ್ಟೇ ಅಲ್ಲದೇ ಸಾಕಷ್ಟು ಪ್ರಚಾರವನ್ನೂ ಪಡೆದಿದೆ.

ಹೀಗಾಗಿ ಈ ಐಡಿಯಾವನ್ನು ಕಾಂಗ್ರೆಸ್​ ನಾಯಕರಿಗೆ ಕೊಟ್ಟಿದ್ದು ಯಾರು ಎನ್ನುವ ಪ್ರಶ್ನೆ ಎದುರಾಗಿತ್ತು.

ಕಾಂಗ್ರೆಸ್ ನಾಯಕರು, ಏಕಾಏಕಿ ಹೂ ಮುಡಿದುಕೊಂಡು ಬಂದಿಲ್ಲ ಎನ್ನುವುದು ಸ್ಪಷ್ಟವಾಗಿದ್ದು ಈ ಐಡಿಯಾ ಹಿಂದೆ ಸುನಿಲ್ ಕನಗೊಳು ತಂಡ ಕೆಲಸ ಮಾಡಿದೆ ಎನ್ನುವುದು ತಿಳಿದುಬಂದಿದೆ.

ಸುನಿಲ್ ಕನಗೋಳು ಹಿಂದೆಯೇ ಹೂ ಮುಡಿದು ಸಂದೇಶರವಾನೆ ಮಾಡಿದರೆ ಸಾರ್ವಜನಿಕವಾಗಿ ಚರ್ಚೆಯಾಗಲಿದೆ ಎಂದಿದ್ದರು. ಇವರನ್ನು ಕಾಂಗ್ರೆಸ್ ಪರವಾಗಿ ರಣತಂತ್ರ ರೂಪಿಸಲು ಎಐಸಿಸಿಯಿಂದ ನೇಮಕ ಮಾಡಲಾಗಿದೆ.