ಕಬ್ಬಿಗೆ ಎಫ್.ಆರ್.ಪಿ.ದರ ಹೆಚ್ಚಳ ಕುರಿತು ಸಿ.ಎಂ.ಜೊತೆ ಚರ್ಚೆ – ಸಚಿವ ಮುನೇನಕೊಪ್ಪ

ಕಬ್ಬಿಗೆ ಎಫ್.ಆರ್.ಪಿ. ದರ ಈಗಾಗಲೇ ನಿಗಿದಿಯಾಗಿದೆ. ಆದರೆ, ಮುಧೋಳದಲ್ಲಿ ರೈತರು ಎಫ್.ಆರ್.ಪಿ. ಬೆಲೆ ಹೆಚ್ಚಳಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದು, ಈ ಕುರಿತು ಹಿರಿಯ ಸಚಿವ ಗೋವಿಂದ ಕಾರಜೋಳ ಅವರು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಸಕ್ಕರೆ ಖಾತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ದೇಶದಲ್ಲಿಯೇ ನಮ್ಮ ರಾಜ್ಯದಲ್ಲಿ 19 ಸಾವಿರದ 634 ಕೋಟಿ 88 ಲಕ್ಷ ರೂಪಾಯಿಯಷ್ಟು ಎಫ್.ಆರ್.ಪಿ. ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಿಸಲಾಗಿದೆ. ಹಿಂದಿನ ಯಾವುದೇ ಬಾಕಿ ಉಳಿಸಿಲ್ಲ ಎಂದರು.
ಎಫ್.ಆರ್.ಪಿ.ಗಿಂತ ಹೆಚ್ಚು ಬೆಲೆ ಕೊಡಬೇಕು ಎಂದು ರೈತರು ಬೇಡಿಕೆ ಇಟ್ಟಿದ್ದು, ಮುಖ್ಯಮಂತ್ರಿಗಳು ರಾಜ್ಯದ ರೈತರ ಜೊತೆ ಇರುತ್ತಾರೆ ಎನ್ನುವ ವಿಶ್ವಾಸವಿದೆ. ಆದ್ದರಿಂದ ರೈತರು ಪ್ರತಿಭಟನೆ ಹಿಂಪಡೆದು, ಕಬ್ಬನ್ನು ಕಾರ್ಖಾನೆಗೆ ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಸಚಿವರು ಮನವಿ ಮಾಡಿದರು.