ನಾಲ್ಕು ಚಿನ್ನದ ಪದಕ ಪಡೆದ ಪೂಜಾ ಕುಲಕರ್ಣಿ

ಧಾರವಾಡದ ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಚಾಲನೆ ನೀಡಿದ್ರು. ಅನಂತರ ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಪದಕ ಪ್ರದಾನ ಮಾಡಿದ್ರು. ಇನ್ನು ಕಾಲೇಜಗೆ ಟಾಪರ್ ಅದಂತ ಪೂಜಾ ಕುಲಕರ್ಣಿ ನಾಲ್ಕು ಚಿನ್ನದ ಪದಕ ಪಡೆದಿದ್ದಾರೆ. ಅವರು ಈ ರೀತಿ ಸಂತಸವನ್ನು ಹಂಚಿಕೊಂಡಿದ್ದಾರೆ. ಬಿಎಸಿ ಅಗ್ರಿಕಲ್ಚರ್ ನಲ್ಲಿ ಹೆಚ್ಚು ಅಂಕ ಪಡಿದಿದ್ದೇನೆ, ನನಗೆ ನಾಲ್ಕು ಚಿನ್ನದ ಪದಕಗಳು ಸಿಕ್ಕಿವೆ. ಪದಕ ಸಿಕ್ಕಿದಕ್ಕೆ ನನಗೆ ತುಂಬಾ ಖುಷಿಯಾಗಿದೆ.ಆದ್ರೆ ಕೆಲವು ಸಮಸ್ಯೆಯಿಂದ ಕಾನ್ವೋಕೇಷನ್ ಬರಲಿಕ್ಕೆ ಆಗಿಲ್ಲ, ಅದ್ರಿಂದ ನಂಗೆ ಬೇಜಾರ ಇದೆ. ಅದ್ರು ಪದಕ ಸಿಕ್ಕಿದಕ್ಕೆ ತುಂಬಾ ಸಂತೋಷವಾಗಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.