ಮಲೇಷ್ಯಾದಲ್ಲಿ ಭೂಕುಸಿತ; 8 ಮಂದಿ ಮೃತ್ಯು

ಮಲೇಷ್ಯಾದಲ್ಲಿ ಭೂಕುಸಿತ; 8 ಮಂದಿ ಮೃತ್ಯು

ಮಲೇಷ್ಯಾದಲ್ಲಿ ಭೂಕುಸಿತ ಸಂಭವಿಸಿ 8 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ಕೌಲಾಲಂಪುರದ ಹೊರವಲಯದಲ್ಲಿರುವ ಸೆಲಂಗೋರ್‌ ರಾಜ್ಯದಲ್ಲಿ ಭೂಕುಸಿತ ಸಂಭವಿಸಿದ್ದು, ಪರಿಹಾರ & ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. 31 ಮಂದಿಯನ್ನು ಶಿಬಿರ ಸ್ಥಳದಿಂದ ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆಯ ನಿರ್ದೇಶಕ ನೊರಾಜಮ್‌‌‌ ಖಮೀಸ್‌ ತಿಳಿಸಿದ್ದಾರೆ. ಕ್ಯಾಂಪ್‌‌ಸೈಟ್‌ನಿಂದ 30 ಮೀ. ಎತ್ತರದಿಂದ ಭೂಕುಸಿತ ಸಂಭವಿಸಿದೆ.