ಸಿಂಹದ ಆಗಮನದಿಂದ ಕಾಂಗ್ರೆಸ್ ಗೆ ಶುರುವಾಗಿದೆ ಭಯ: ಸಚಿವ ಆರ್.ಅಶೋಕ್
ಹೊಸದಿಗಂತ ವರದಿ,ಕಲಬುರಗಿ:
ತಾಂಡಾದ ಮೂಲ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲು ಬರುತ್ತಿರುವ ಸಿಂಹ ಪ್ರಧಾನಿ ನರೇಂದ್ರ ಮೋದಿಯ ಅವರ ಆಗಮನದಿಂದ ಕಾಂಗ್ರೆಸ್ ಪಕ್ಷಕ್ಕೆ ಭಯ,ನಡುಕ ಉಂಟಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಂಬಾಣಿ ಜನರಿಗೆ ನಾಳೆಯ ದಿನ ಸಂತೋಷದ ದಿನವಾಗಿದೆ.ಆದರೆ ತಾಂಡಾಗಳ ಹಕ್ಕು ಪತ್ರ ವಿತರಣಗಯಲ್ಲೂ ಸಹ ಕಾಂಗ್ರೆಸ್ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ.ಎಂದರು.
ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಬೆಳೆ ಪರಿಹಾರ, ಮನೆ ಮನೆಗೆ ಗಂಗೆ ಸೇರಿದಂತೆ ಹಲವು ಯೋಜನೆಗಳನ್ನು ನೀಡಿದ್ದಾರೆ. ಆದರೆ, ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಜನರಿಗೆ ಎನೂ ನೀಡಿದೆ ಎಂದು ಪ್ರಶ್ನಿಸಿದ ಅವರು,ಈ ವಿಷಯದ ಬಗ್ಗೆ ಬಹಿರಂಗವಾಗಿ ಚಚೆ೯ ಗೆ ಬರಲು ಆಹ್ವಾನ ನೀಡಿದರು.
ನಾಳೆಯ ಕಾಯ೯ಕ್ರಮದ ಇಡೀ ದೇಶದ ಇತಿಹಾಸದಲ್ಲೇ ಗಿನ್ನಿಸ್ ದಾಖಲೆ ಮಾಡಲಿದೆ.ಎಕಕಾಲಕ್ಕೆ 51,900 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವ ಐತಿಹಾಸಿಕ ಕಾಯ೯ಕ್ರಮ ನಡೆಯುತ್ತಿದ್ದು,ಹೆಮ್ಮೆಯ ವಿಷಯವಾಗಿದೆ ಎಂದರು.
ಮೊದಲ ಹಂತವಾಗಿ ಕಲಬುರಗಿ ಜಿಲ್ಲೆಯಲ್ಲಿ ಹಕ್ಕು ಪತ್ರ ವಿತರಣೆ ನಡೆಯುತ್ತಿದ್ದು,ಎರಡನೇ ಹಂತವಾಗಿ ದಾವಣಗೆರೆ ಜಿಲ್ಲೆಯಲ್ಲಿ ನಡೆಯಲಿದೆ ಎಂದು ತಿಳಿಸಿದ ಅವರು, ಈ ಕಾಯ೯ಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಕರೆಸುವ ಚಿಂತನೆ ನಡೆದಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಡಾ.ಉಮೇಶ್ ಜಾಧವ,ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ, ಬಿ.ಜಿ.ಪಾಟೀಲ್,ಬಸವರಾಜ ಮತ್ತಿಮಡು, ಪಿ.ರಾಜೀವ್, ಚಂದು ಪಾಟೀಲ್, ಅವಿನಾಶ್ ಜಾಧವ,ಶಿವರಾಜ್ ಪಾಟೀಲ್ ರದ್ದೇವಾಡಗಿ ಸೇರಿದಂತೆ ಹಲವು ನಾಯಕರು ಇದ್ದರು.