'ಲಾಕ್ಡೌನ್: ಜನರ ಅಭಿಪ್ರಾಯಗಳನ್ನು ಕೇಳುತ್ತಿರುವುದು ದೌರ್ಬಲ್ಯದ ಸಂಕೇತ'

ವೈದ್ಯಕೀಯ ಮುಂಜಾಗ್ರತೆಗಳು ಜನರ ಅಭಿಪ್ರಾಯವನ್ನು ಆಧರಿಸಿಲ್ಲ ಮತ್ತು ಲಾಕ್ ಡೌನ್ ಎಂಬುದು ಸರ್ಕಾರಕ್ಕೆ ಇರುವ ಪರಿಹಾರಾತ್ಮಕ ಆಯ್ಕೆಯೂ ಅಲ್ಲ. ಕೊರೊನಾ ಲಾಕ್ ಡೌನ್ ಮತ್ತು ನೈಟ್ ಕರ್ಫ್ಯೂ ವಿಚಾರದಲ್ಲಿ ಬಿಜೆಪಿ ಪಕ್ಷದ ಒಳಗೆ ಹಲವು ಗೊಂದಲಗಳಿದ್ದು ಸರ್ಕಾರವು ಲಾಕ್ ಡೌನ್ ಮಾಡಬೇಕೇ ಬೇಡವೇ ಎಂಬುದರ ಬಗ್ಗೆ ಜನಾಭಿಪ್ರಾಯ ಕೇಳುತ್ತಿರುವುದು ವೈಜ್ಞಾನಿಕ ಕ್ರಮವಲ್ಲ. ವೈದ್ಯಕೀಯ ಅಭಿಪ್ರಾಯ ಮತ್ತು ಜನ ಸಾಮಾನ್ಯರ ದೃಷ್ಟಿಯಿಂದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿರುವುದು ರಾಜ್ಯ ಸರ್ಕಾರದ ಜವಾಬ್ದಾರಿ ಆಗಿದೆ. ಆದರೆ ಈ ಸರ್ಕಾರವು ಎಲ್ಲ ರೀತಿಯ ಆಡಳಿತಾತ್ಮಕ ಅಪದ್ದಗಳ ಜೊತೆಗೆ ಇದೀಗ ಲಾಕ್ ಡೌನ್ ವಿಚಾರವಾಗಿ ಜನರ ಅಭಿಪ್ರಾಯಗಳನ್ನು ಕೇಳುತ್ತಿರುವುದು ಇವರ ದೌರ್ಬಲ್ಯದ ಸಂಕೇತವಾಗಿದೆ.
ಕೊರೊನಾ ಮೊದಲ ಹಂತದಲ್ಲೇ ಎರಡನೇ ಮತ್ತು ಮೂರನೇ ಅಲೆಯ ಬಗ್ಗೆ ತಜ್ಞರು ಮಾಹಿತಿ ನೀಡಿದ್ದರು. ಹೀಗಿದ್ದರೂ ಸಹ ಅದಕ್ಕೆ ಪೂರಕ ಸಿದ್ಧತೆ ಮಾಡಿಕೊಳ್ಳದ ಸರ್ಕಾರವು ಇಲ್ಲಿಯವರೆಗೆ ನಾವು ಸಲಹೆ ಕೊಟ್ಟಂತೆ ಸಾಂಕ್ರಾಮಿಕ ರೋಗ ತಜ್ಞರ ಘಟಕಗಳನ್ನು ಬಲಪಡಿಸುವಂತಹ ಕೆಲಸವನ್ನು ಮಾಡಲಿಲ್ಲ. ಇನ್ನು ತಜ್ಞರು ಹೇಳುವಂತೆ ಫೆಬ್ರವರಿ ವೇಳೆಗೆ ಕರೋನಾ ಉಚ್ಛ ಮಟ್ಟಕ್ಕೆ ತಲುಪಿ ಶೀಘ್ರ ಇಳಿಮುಖವಾಗಲಿದೆ.
ಈ ಹಂತದಲ್ಲಿ ನೆಗಡಿ, ಕೆಮ್ಮು,ಜ್ವರ, ಗಂಟಲು ನೋವಿನ ಲಕ್ಷಣ ಇರುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಅಂದಾಜಿಸಿದ್ದಾರೆ. ಹೀಗಾಗಿ ಜನ ಸಾಮಾನ್ಯರ ಚಲನಶೀಲ ಬದುಕಿನಲ್ಲಿ Mode of infection ಯಾವ ರೀತಿ ಉಂಟಾಗುತ್ತದೆ ಎಂಬುದನ್ನು ಸರ್ಕಾರ ತಿಳಿದುಕೊಂಡು ಆ ಬಗ್ಗೆ ಗಮನ ಜಾಗೃತಿ ಮೂಡಿಸಬೇಕು. ಇನ್ನು ಸೋಂಕು ಹೆಚ್ಚಾದ ಸಂದರ್ಭದಲ್ಲಿ ಸರ್ಕಾರಕ್ಕೆ ಎಲ್ಲರಿಗೂ ಆಸ್ಪತ್ರೆ ಮತ್ತು ಆರೋಗ್ಯ ಸೌಲಭ್ಯಗಳನ್ನು ವಿತರಿಸಲು ಸಾಧ್ಯವೇ? ವಿರೋಧ ಪಕ್ಷವೇ ಜನರಿಗೆ ನೆರವಾಗುವಂತಹ ಕೆಲಸ ಮಾಡಿತ್ತು
ಇನ್ನು ಸೋಂಕಿತರೆಲ್ಲರೂ ಮನೆಯಲ್ಲೇ ಇರಲಿ ಎಂದು ಸರ್ಕಾರವು ಅವರ ಮೇಲೆ ನಿರ್ಬಂಧ ವಿಧಿಸಿದರೆ, ಅವರ ದೈನಂದಿನ ಬದುಕಿಗೆ ನೆರವಾಗಲು ಸರ್ಕಾರ ಯಾವ ರೀತಿಯ ಸಿದ್ಧತೆ ನಡೆಸಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಿ. ಕಾರಣ ಕೊರೊನಾ ಮೊದಲನೇ ಹಂತದಲ್ಲಿ ಇದ್ದಾಗ ಸರ್ಕಾರಕ್ಕಿಂತ ಹೆಚ್ಚಾಗಿ ವಿರೋಧ ಪಕ್ಷವೇ ಜನರಿಗೆ ನೆರವಾಗುವಂತಹ ಕೆಲಸ ಮಾಡಿತ್ತು. ಇನ್ನು ಪ್ರಧಾನಿಗಳು ಘೋಷಿಸಿದ್ದ 20 ಲಕ್ಷ ಕೋಟಿಯೂ ಸಹ ಅತಿದೊಡ್ಡ ಸುಳ್ಳು ಪ್ಯಾಕೇಜ್ ಎಂದು ಸಾಬೀತಾಯಿತು. ಪಿಎಂ ಕೇರ್ಸ್ ಹಣಕ್ಕಂತೂ ಸರಿಯಾದ ಲೆಕ್ಕಪತ್ರವೇ ಇಲ್ಲದ ಪರಿಸ್ಥಿತಿ
ಇನ್ನು ಪಿಎಂ ಕೇರ್ಸ್ ಹಣಕ್ಕಂತೂ ಸರಿಯಾದ ಲೆಕ್ಕಪತ್ರವೇ ಇಲ್ಲದ ಪರಿಸ್ಥಿತಿ ಉಂಟಾಯಿತು. ಪರಿಸ್ಥಿತಿ ಹೀಗಿರುವಾಗ ವಲಸೆ ಕಾರ್ಮಿಕರು, ಅಲೆಮಾರಿಗಳು, ಬಡ ಕೂಲಿ ಕಾರ್ಮಿಕರು, ಸಣ್ಣ ಮತ್ತು ಮಧ್ಯಮ ರೈತರು ಸೋಂಕಿನ ವೇಳೆ ಜೀವನ ನಡೆಸಲು ಸರ್ಕಾರ ಸಹಾಯ ಮಾಡಬಲ್ಲದೇ ಎಂಬುದು ಈಗಿನ ಪ್ರಶ್ನೆ. ಇನ್ನು ಇದೇ ವೇಳೆಗೆ ಕೊರೊನಾ ಲಸಿಕೆ ಪಡೆದರೂ ಸೋಂಕು ಹರಡುತ್ತಿರುವ ಬಗ್ಗೆ ವರದಿಗಳು ಇದ್ದು ಈ ಸಂಗತಿಯು ಸರ್ಕಾರ ನೀಡುತ್ತಿರುವ ಲಸಿಕೆಯ ಬಗ್ಗೆ ಸ್ವತಃ ಅವರ ಪಕ್ಷದ ಜನ ಪ್ರತಿನಿಧಿಗಳಿಗೇ ಅನುಮಾನ ಬರುವಂತೆ ಮಾಡಿದೆ.
ಸರ್ಕಾರದ ಜವಾಬ್ದಾರಿ ಮಾತ್ರವಾಗಿರದೇ ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ
ಮೈಸೂರಿನ ಸಂಸದ ಪ್ರತಾಪ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಲಸಿಕೆಯ ಬಗ್ಗೆ ಆಡಿದ ಮಾತುಗಳನ್ನು ಇಲ್ಲಿ ಗಮನಿಸಬಹುದು. ಲಸಿಕೆಯ ಬಗ್ಗೆ ಸರ್ಕಾರದವರಿಗೇ ಸ್ಪಷ್ಟತೆ ಇಲ್ಲ ಎಂದ ಮೇಲೆ ಜನ ಸಾಮಾನ್ಯರಿಗೆ ಲಸಿಕೆಯ ಬಗ್ಗೆ ಭರವಸೆ ಮಾಡುವುದಾದರೂ ಹೇಗೆ? ರೋಗದ ನಿಯಂತ್ರಣದ ಬಗ್ಗೆ ವಿಶ್ವಾಸ ಮೂಡಿಸದ ಲಸಿಕೆಯನ್ನೇಕೆ ಸರ್ಕಾರದವರು ಜನರಿಗೆ ನೀಡುತ್ತಿದ್ದಾರೆ ಎಂಬುದನ್ನು ಜನರಿಗೆ ತಿಳಿಸಲಿ. ರೋಗ ನಿಯಂತ್ರಣವು ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಾಗಿರದೇ ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ. ಹಾಗೆಂದ ಮಾತ್ರಕ್ಕೆ ಸರ್ಕಾರದ ವೈಫಲ್ಯಗಳನ್ನು ಸಮರ್ಥಿಕೊಳ್ಳುವುದು ಬೇಕಿಲ್ಲ.
ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸರಕಾರದ ವಿರುದ್ದ ಕಿಡಿ ಅತಿಮುಖ್ಯವಾಗಿ ಲಾಕ್ ಡೌನ್ ಬೇಕೇ ಬೇಡವೇ ಎಂದು ಅಭಿಪ್ರಾಯ ಸಂಗ್ರಹಣೆ ಮಾಡುವ ವಿಧಾನವೇ ಮೂರ್ಖತನದ್ದು. ಕಾರಣ ವೈದ್ಯಕೀಯ ಮುಂಜಾಗ್ರತೆ ಎಂಬುದು ಜನರ opinion poll ಅನ್ನು ಆಧರಿಸಿಲ್ಲ ಮತ್ತು ಅದು ಸರ್ಕಾರಕ್ಕೆ ಇರುವ ಪರಿಹಾರಾತ್ಮಕ ಆಯ್ಕೆಯೂ ಅಲ್ಲ. ಇದು ಖಚಿತವಾಗಿ ವೈದ್ಯಕೀಯ ತಜ್ಞರು ಮತ್ತು ಸಾಂಕ್ರಾಮಿಕ ರೋಗ ತಜ್ಞರ ಸಲಹೆ ಸೂಚನೆಗಳನ್ನು ಆಧರಿಸಿದ ಸಂಗತಿಯಾಗಿದೆ. ಇಲ್ಲಿ ಲಾಕ್ ಡೌನ್ ಮಾಡಬೇಕೇ? ಬೇಡವೇ ಅಥವಾ ರೋಗ ಈ ಕ್ರಮ ಅನುಸರಿಸಬೇಕೇ ಅಥವಾ ಬೇಡವೇ ಎಂದು ಮೀನಮೇಷ ಎಣಿಸುವುದು ಸರ್ಕಾರದ ವೈಫಲ್ಯ ಮತ್ತು ಅಸ್ಪಷ್ಟತೆಯ ಸಂಕೇತವಾಗಿದ್ದು ಇದು ಜನ ಸಾಮಾನ್ಯರ ಆರೋಗ್ಯ ಮತ್ತು ಬದುಕಿನ ಹಿತಕ್ಕೆ ವಿರುದ್ಧವಾದ ಸಂಗತಿಯಾಗಿದೆ .