ಕರ್ನಾಟಕ ಖೋ ಖೋ ತಂಡಕ್ಕೆ ಕಂಚು

ಕರ್ನಾಟಕ ಖೋ ಖೋ ತಂಡಕ್ಕೆ ಕಂಚು

ಕೋಲಾರ,ಅ೬:ಗುಜರಾತ್ ರಾಜ್ಯದ ಅಹ್ಮದಾಬಾದ್‌ನಲ್ಲಿ ಸೆ.೩೦ ರಿಂದ ಅ.೫ ರವರೆಗೂ ನಡೆಯುತ್ತಿರುವ ೩೬ನೇ ರಾಷ್ಟ್ರೀಯ ಕ್ರೀಡಾ ಕೂಟದ ಖೋ-ಖೋ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಪುರುಷರ ತಂಡವು ತೃತೀಯ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದೆ.
ರಾಜ್ಯ ಪುರುಷರ ತಂಡದ ತರಬೇತುದಾರರಾಗಿ ಕೋಲಾರ ಖೋ-ಖೋ/ ಕಬ್ಬಡಿ, ಸಂಸ್ಥೆಯ ಕೋಲಾರದ ಆರ್ ಶ್ರೀಧರ್ ನೇತೃತ್ವದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿತು.
ಖೋಖೋ ಪಂದ್ಯದಲ್ಲಿ ರಾಜ್ಯ ತಂಡದಲ್ಲಿ ಸುದರ್ಶನ್ ನಾಯಕತ್ವದಲ್ಲಿ ಗೌತಮ್, ದಿನೇಶ್‌ನಾಯಕ್, ಪ್ರಜ್ವಲ್, ವೇಣುಗೋಪಾಲ್, ಸೊಬದ್, ಮೊಹಮದ್ ತಾಸೀನ್, ವಿಜಯಕುಮಾರ್, ಶಶಿಕುಮಾರ್,ರೋಹಿತ್, ಮಹೇಶ್, ಸಂಜಯ್ ಮತ್ತಿತರರು ಉತ್ತಮ ಪ್ರದರ್ಶನ ನೀಡಿದರು.