2 ಸಾವಿರ ಮುಟ್ಟಲ್ಲ 3 ಸಾವಿರನೇ ಬೇಕು ಅಂದಿದ್ದ ಲೇಡಿ ಪಿಡಿಒ ಮತ್ತೊಂದು ಕರಾಳ ಮುಖ ಬಯಲು

2 ಸಾವಿರ ಮುಟ್ಟಲ್ಲ 3 ಸಾವಿರನೇ ಬೇಕು ಅಂದಿದ್ದ ಲೇಡಿ ಪಿಡಿಒ ಮತ್ತೊಂದು ಕರಾಳ ಮುಖ ಬಯಲು

ರಾಯಚೂರು: ಎರಡು ಸಾವಿರ ಮುಟ್ಟುವುದಿಲ್ಲ ಮೂರು ಸಾವಿರನೇ ಬೇಕು ಅಂದಿದ್ದ ಮಹಾನ್​ ಭ್ರಷ್ಟಾಚಾರಿ ಮಹಿಳಾ ಪಂಚಾಯತ್​ ಅಭಿವೃದ್ಧಿ ಅಧಿಕಾರಿ (ಪಿಡಿಒ) ಯ ಮತ್ತೊಂದು ಲಂಚಾವತಾರದ ಸ್ಟೋರಿ ಬಯಲಾಗಿದೆ.

ರಾಯಚೂರು ಜಿಲ್ಲೆ ಮರ್ಚಟಾಳ ಗ್ರಾಮ ಪಂಚಾಯ್ತಿ ಪಿಡಿಒ ಶ್ವೇತಾ ಕುಲಕರ್ಣಿಯ ಭ್ರಷ್ಟಾಚಾರದ ಸ್ಟೋರಿ ಇದಾಗಿದೆ.

ನವೆಂಬರ್​ 1 ರಂದು ಪಿಡಿಒ ಶ್ವೇತಾ ಕುಲಕರ್ಣಿಯ ಲಂಚಾವತಾರದ 

ಸುದ್ದಿ ಪ್ರಟಕವಾಗಿ 15 ದಿನ ಕಳೆದರೂ ಮತ್ತು ಭ್ರಷ್ಟಾಚಾರ ಸಾಬೀತಾದ್ರೂ ಹಿರಿಯ ಅಧಿಕಾರಿಗಳು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಹಣ ವಸೂಲಿಯ ಮತ್ತೊಂದು ಕರಾಳ ಮುಖ
2020 ರಲ್ಲಿಯೂ ನರೇಗಾ ಯೋಜನೆಯಲ್ಲಿ ಪಿಡಿಒ ಭ್ರಷ್ಟಾಚಾರ ಮಾಡಿದ್ದರು. ಭ್ರಷ್ಟಾಚಾರ ಸಾಬೀತಾದ ಹಿನ್ನೆಲೆ 5 ಲಕ್ಷ ಅನುದಾನವನ್ನು ಮರುಪಡೆಯುವಂತೆ ಒಂಬುಡ್ಸಮನ್ ಕಾರ್ಯಾಲಯ ಜಿಲ್ಲಾ ಪಂಚಾಯ್ತಿ ಸಮಿತಿ ಹೇಳಿತ್ತು. ಆದರೆ, 2020ರಲ್ಲಿನ ಭ್ರಷ್ಟಾಚಾರದ ಬಗ್ಗೆಯೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.

2020ರಲ್ಲಿ ಖಾಸಗಿ ಎಂಟರ್​ಪ್ರೈಸಸ್ ಜತೆ ಸೇರಿ ಪಿಡಿಒ ಶ್ವೇತಾ ಕುಲಕರ್ಣಿ ಹಣ ದುರುಪಯೋಗಪಡಿಸಿಕೊಂಡಿಸಿದ್ದರು. ಮೇಲಿಂದ ಮೇಲೆ ಭ್ರಷ್ಟಾಚಾರ ಹಾಗೂ ಹಣ ವಸೂಲಿ ದಂಧೆ ಮಾಡ್ತಿದ್ರೂ ಹಿರಿಯ ಅಧಿಕಾರಿಗಳು ಮಾತ್ರ ಜಾಣ ಮೌನ ವಹಿಸಿದ್ದಾರೆ. ಇದೀಗ ರಾಯಚೂರು ಜಿಲ್ಲೆಯಲ್ಲಿ ಕೆಲ ಭ್ರಷ್ಟರಿಗೆ ಭಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆ ವಾತವಾರಣವನ್ನು ಹಿರಿಯ ಅಧಿಕಾರಿಗಳೇ ಸೃಷ್ಟಿ ಮಾಡುತ್ತಿದ್ದಾರೆ