ಗ್ರಾ.ಪಂ ಸದಸ್ಯೆಯ ಪತಿಗೆ ಧಮ್ಕಿ: ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದೇನು ಗೊತ್ತಾ?

ಹಾಸನ: ಶಾಸಕ ಕೆ.ಎಂ ಶಿವಲಿಂಗೇಗೌಡ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ವಾಸು ಎಂಬವರಿಗೆ ಹಣಕ್ಕಾಗಿ ಧಮ್ಕಿ ಹಾಕಿರುವ ಆಡಿಯೋ ವೈರಲ್ ಆಗಿದೆ. ಈ ವಿಚಾರ ಸಂಬಂಧ ಶಿವಲಿಂಗೇಗೌಡ ಸ್ಪಷ್ಟನೆ ನೀಡಿದ್ದಾರೆ.
ನನಗೆ ಸಹಕಾರ ನೀಡಿಬೇಕು ಎಂದು ವಾಸುಗೆ ಫೋನ್ ಮಾಡಿದ್ದೆ ಆದರೆ ಅವನು ರೆಕಾರ್ಡ್ ಮಾಡಿಕೊಳ್ಳುತ್ತಾನೆ ಅಂತ ನನಗೆ ಗೊತ್ತಿರಲಿಲ್ಲ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಸು ಅವರು ಏನೋ ಸ್ವಲ್ಪ ಕಷ್ಟದಲ್ಲಿ ಇದ್ದಾನೆ ಸಹಾಯ ಮಾಡಿ ಎಂದು ಹೇಳಿದ್ದರು. ಹೀಗಾಗಿ ಕಷ್ಟ, ಸುಖಕ್ಕೆ ಇರುತ್ತಾನೆ ಅಂತ ನಾನೇ ಅವನಿಗೆ 50 ಸಾವಿರ ರೂ. ಕೊಟ್ಟೆ. ಹಣ ಕೊಟ್ಟ ಮರುದಿನ ಚುನಾವಣೆಯಲ್ಲಿ ಬೆಂಬಲ ಕೊಡುತ್ತೇನೆ ಎಂದಿದ್ದರು.