ಶಿವಸೇನೆ ನಾಯಕ 'ಸಂಜಯ್ ರಾವತ್'ಗೆ ಬಿಗ್ ಶಾಕ್ ; ಕೋರ್ಟ್'ನಿಂದ ಜಾಮೀನು ರಹಿತ ವಾರಂಟ್ ಜಾರಿ

ಶಿವಸೇನೆ ನಾಯಕ 'ಸಂಜಯ್ ರಾವತ್'ಗೆ ಬಿಗ್ ಶಾಕ್ ; ಕೋರ್ಟ್'ನಿಂದ ಜಾಮೀನು ರಹಿತ ವಾರಂಟ್ ಜಾರಿ

ವದೆಹಲಿ: ಶಿವಸೇನೆ ನಾಯಕ ಸಂಜಯ್ ರಾವತ್' ಬಿಗ್ ಶಾಕ್ ಎದುರಾಗಿದ್ದು, ಮುಂಬೈ ನ್ಯಾಯಾಲಯ ಶುಕ್ರವಾರ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಕಿರಿತ್ ಸೋಮಯ್ಯ ಅವರ ಪತ್ನಿ ಮೇಧಾ ಸೋಮಯ್ಯ ಅವರು ಸಲ್ಲಿಸಿದ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಹಾಜರಾಗದ ರಾವತ್ ವಿರುದ್ಧ ನ್ಯಾಯಾಲಯ ಶುಕ್ರವಾರ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಮೇಧಾ ಸೋಮಯ್ಯ ಅವರು ರಾವತ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ದೂರುದಾರರ ಹೇಳಿಕೆಯನ್ನ ದಾಖಲಿಸಿದ ನಂತರ ಸೆವ್ರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಾರಂಟ್ ಹೊರಡಿಸಿದರು. ಇನ್ನು ಮುಂದಿನ ವಿಚಾರಣೆಯನ್ನ ಜನವರಿ 28ಕ್ಕೆ ಮುಂದೂಡಿದರು. ನ್ಯಾಯಾಲಯದ ಆದೇಶದ ಹೊರತಾಗಿಯೂ ರಾವತ್ ಹಾಜರಾಗಲಿಲ್ಲ ಎಂದು ಮೇಧಾ ಸೋಮಯ್ಯ ಅವರ ವಕೀಲರು ಹೇಳಿದರು. ಜುಲೈ 2022 ರಲ್ಲಿ, ಮಜ್ಗಾಂವ್ನ ಮೆಟ್ರೋಪಾಲಿಟನ್ ನ್ಯಾಯಾಲಯವು ರಾವತ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.

ಮುಂಬೈ ಸಮೀಪದ ಮೀರಾ ಭಯಂದರ್ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯದ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ತಾನು ಮತ್ತು ತನ್ನ ಪತಿ 100 ಕೋಟಿ ರೂ.ಗಳ ಹಗರಣವನ್ನ ಎಸಗಿದ್ದೇವೆ ಎಂದು ರಾವತ್ ಆಧಾರರಹಿತ ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆ ಎಂದು ಸೋಮಯ್ಯ ನ್ಯಾಯಾಲಯದ ಮೊರೆ ಹೋಗಿದ್ದರು.