ಹತ್ತಿ ಬೆಳೆಗಾರರಿಗೆ ಖುಷಿ ಸುದ್ದಿ ನೀಡಿದ್ರು ಕೇಂದ್ರ ಸರಕಾರ.!

ನವದೆಹಲಿ : ಕೇಂದ್ರ ಸಚಿವ ಸಂಪುಟವು 2014-15 ರಿಂದ 2020-21ರ ವರೆಗಿನ ಹತ್ತಿ ಋತುಗಳಲ್ಲಿ ಭಾರತೀಯ ಕಾಟನ್ ಕಾರ್ಪೊರೇಷನ್ (CCI)ಗೆ 17,408.85 ಕೋಟಿ ರೂ.ಗಳ ಬೆಲೆ ಬೆಂಬಲಕ್ಕೆ ಅನುಮೋದನೆ ನೀಡಿದೆ.
ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾಗೆ 17,408.85 ಕೋಟಿ ರೂ.ಗಳ ಬದ್ಧತೆಯ ಬೆಲೆ ಬೆಂಬಲಕ್ಕೆ ಕೇಂದ್ರ ಸಚಿವ ಸಂಪುಟವು ಅನುಮತಿ ನೀಡಿದೆ. ಅದ್ರಂತೆ, 2014-15 ರಿಂದ 2020-21 ರವರೆಗಿನ ಹತ್ತಿ ಋತುವಿನಲ್ಲಿ ಹತ್ತಿಗೆ ಎಂಎಸ್‌ಪಿ ಆಪ್ʼಗಳ ಅಡಿಯಲ್ಲಿ ನಷ್ಟವನ್ನ ಮರುಪಾವತಿಸುವ ವೆಚ್ಚಕ್ಕೆ ಸಿಸಿಇಎ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದರು.