ನಾನು ಸಿಎಂ ಸ್ಥಾನದ ಆಕಾಂಕ್ಷಿ.

ದೊಡ್ಡಬಳ್ಳಾಪುರದಲ್ಲಿ ಮಾಜಿ ಡಿಸಿಎಂ ಡಾ. ಪರಮೇಶ್ವರ್ ಹೇಳಿಕೆ.

ದೊಡ್ಡಬಳ್ಳಾಪುರ. ಎರಡನೇ ಅಲೆಯ ವೇಳೆ ತೋರಿದ ಅಸಡ್ಡೆಯಿಂದ ಆದ ಪ್ರಮಾದಿಂದ ರಾಜ್ಯ ಸರ್ಕಾರ ಪಾಠ ಕಲಿಯಬೇಕಿದ್ದು, ಮೂರನೆ ಅಲೆಗೂ ‌ಮುನ್ನವೇ ಸಂಪೂರ್ಣ ವ್ಯವಸ್ಥೆ ಸಿದ್ದವಾಗಿಟ್ಟುಕೊಳ್ಳಬೇಕೆಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು. ನಗರದಲ್ಲಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಿತ್ಯ ಅನ್ನದಾಸೋಹದ ಕಾರ್ಯಕ್ರಮ ಭಾಗವಹಿಸಿದ ಅವರು, ಆಹಾರ ಪೊಟ್ಟಣಗಳನ್ನು ವಿತರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ತಜ್ಞರ ವರದಿಯಂತೆ ಮ‌ೂರನೇ ಅಲೆ ಹೆಚ್ಚಾಗಿ ಮಕ್ಕಳು ತೊಂದರೆಗೆ ಈಡುಮಾಡುವ ಆತಂಕವಿದೆ. ಮಕ್ಕಳು‌ ನಮ್ಮ‌ ಭವಿಷ್ಯ.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಶೇಷ ಕಾಳಜಿವಹಿಸಿ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು ಮಟ್ಟದಲ್ಲಿ ಮಕ್ಕಳ ತಜ್ಞರನ್ನು ನೇಮಿಸಬೇಕಿದೆ. ಮೂರನೇ ಅಲೆಗೂ ಮುನ್ನ ರಾಜ್ಯ ಸರ್ಕಾರ ಲಸಿಕೆ ವಿತರಣೆ ತೀವ್ರಗೊಳಿಸುವುದರ ಜೊತೆಗೆ, ವ್ಯವಸ್ಥಿತವಾಗಿ ಅಗತ್ಯ ಕ್ರಮಗಳ ಸಿದ್ದತೆ ಮಾಡಿಕೊಳ್ಳಬೇಕಿದೆ ಎಂದರು. ಕೋವಿಡ್ ಎರಡನೇ ಅಲೆ ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲ: ಮೊದಲನೇ ಅಲೆ ಇಡೀ ವಿಶ್ವಕ್ಕೆ ಕಾಡಿತ್ತು. ಆ ವೇಳೆ ಪ್ರಧಾನಿ ಮೋದಿ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಎರಡನೇ ಅಲೆ ತೀವ್ರವಾಗಿರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯ ನಡುವೆಯೂ ಕೇಂದ್ರ ಸರ್ಕಾರ ಮಾರ್ಗ ಸೂಚಿ ಬಿಡುಗಡೆ ಮಾಡದೆ, ರಾಜ್ಯ ಸರ್ಕಾರಗಳಿಗೆ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಿದರ ಪರಿಣಾಮ ಲಕ್ಷಾಂತರ ಸಾವುಗಳು ಸಂಭವಿಸಲು ಕಾರಣವಾಯಿತು ಎಂದು ಆರೋಪಿಸಿದರು. ಸಾವಿನ ವರದಿ ಆಡಿಟ್ ಮಾಡಿಸಿ:

ಕೋವಿಡ್ ಹಿನ್ನೆಲೆಯಲ್ಲಿ ಸಾವಿನ ಪ್ರಕರಣಗಳ ಕುರಿತು ಸರ್ಕಾರ ನೀಡುವ ವರದಿಗೂ, ಆಸ್ಪತ್ರೆಗಳಲ್ಲಿನ ವರದಿಗೂ ವ್ಯತ್ಯಾಸವಿದ್ದು ಡೆತ್ ಆಡಿಟ್ ನಡೆಸಿ ಜನರಿಗೆ ವಾಸ್ತವ ತಿಳಿಸಬೇಕೆಂದು ಒತ್ತಾಯಿಸಿದರು. 2013ರಿಂದ ಸಿಎಂ ರೇಸ್ ನಲ್ಲಿದ್ದೇನೆ: ರಾಜ್ಯ ಕಾಂಗ್ರೆಸ್‌ನಲ್ಲಿ ಎದ್ದಿರುವ ಮುಂದಿನ ಸಿಎಂ ಯಾರು? ಎಂಬ ಚರ್ಚೆಗೆ ಸಂಬಂಧಿಸಿದಂತೆ ಪರ ವಿರೋಧದ ನಡುವೆಯೇ ನಾನು ಸಹ ಸಿಎಂ ರೇಸ್ ನಲ್ಲಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು. ಸಿಎಂ ರೇಸ್ ನಲ್ಲಿ ನಾನು ಇಲ್ಲ ಎಂದವರು ಯಾರು ಎಂದು ಪ್ರಶ್ನಿಸಿದ ಅವರು, 2013ರಿಂದಲೂ ನಾನು ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿ ಇದ್ದೇನೆ. ಆದರೆ ಇದು ಸಮಯವಲ್ಲ. ಸಾಮೂಹಿಕ ನಾಯಕತ್ವದಲ್ಲಿ ‌ಮುಂದಿನ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಎದುರಿಸಲಿದೆ ಎಂದರು. ಬಿಜೆಪಿ ಪಕ್ಷದ ದುರಾಡಳಿತದಿಂದ ರಾಜ್ಯ ಜನತೆ ಬೇಸತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ‌ ನೀಡಲಿದ್ದು, ಆನಂತರ ಸಿಎಲ್ಪಿ ಸಭೆ ನಡೆದು ಹೈಕಮಾಂಡ್ ಆ ಸಂಧರ್ಭದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕೆಂದು ಚಿಂತಿಸಿ ಅಯ್ಕೆ ಮಾಡುತ್ತದೆ. ಈ ನಡುವೆ ಕಾಂಗ್ರೆಸ್ ಶಾಸಕರುಗಳು ಈ ರೀತಿ ಮುಖ್ಯಮಂತ್ರಿ ಅಭ್ಯರ್ಥಿ ಹೇಳಿಕೆ ನೀಡುತ್ತಿರುವುದು ಅವರ ವಯಕ್ತಿಕ ಅಭಿಪ್ರಾಯವಾಗಿದ್ದು. ಸಿಎಂ ಅಭ್ಯರ್ಥಿ ವಿಚಾರವಾಗಿ ಯಾರೂ ಚರ್ಚೆ ಬೇಡಾ ಎಂದು ತಿಳಿಸಿದ್ದೇನೆ. ಇದನ್ನು ಇಲ್ಲಿಗೆ ಬಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರದ ದುರಾಡಳಿತವನ್ನು ಜನರಿಗೆ ತಲುಪಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಒಟ್ಟಾಗಿ ಶ್ರಮಿಸುವಂತೆ ತಿಳಿಸಿದ್ದೇನೆ ಎಂದರು.

K.S.NARAYANASWAMY Chikkaballapur District reporter...