ಕೊಚಿಮುಲ್: ಮದರ್ ಡೈರಿಯೊಂದಿಗೆ ಸಂಪರ್ಕ ಕಲ್ಪಿಸಿ | Chikkamagalur | Kochimul |
ಕೊಚಿಮುಲ್ ಡೈರಿ ಇಬ್ಬಾಗವಾದ್ರೆ ಮಾತ್ರ ನಮ್ಮ ರೈತರಿಗೆ ಲಾಭ ಕೊಡಲು ಸಾದ್ಯ ಎಂದು ಸಚಿವರ ಪರ ಬ್ಯಾಂಟಿಂಗ್ ಮಾಡಿದ್ದ ಮಾಜಿ ಅಧ್ಯಕ್ಷ ಕೆ.ವಿ.ನಾಗಾರಾಜ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಹಾಕಿ ನಿರ್ದೇಶಕರು ಭರಣಿವೆಂಕಟೇಶ್, ಊಲವಾಡಿ ಅಶ್ವಥರೆಡ್ಡಿ ಗುಡಿಬಂಡೆ ಆದಿನಾರಾಯಣಪ್ಪ ಶಿಬಿರ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದರು. ಕೊಚಿಮುಲ್ ಇಬ್ಬಾಗಕ್ಕೆ ನಮ್ಮದೇನು ತಕರಾರಿಲ್ಲ ಆದ್ರೆ ಇಬ್ಬಾಗವಾದ ಕೂಡಲೆ ಚಿಕ್ಕಬಳ್ಳಾಪುರ ಡೈರಿಯನ್ನ ಮದರ್ ಡೈರಿಗೆ ಹೊಂದಿಸಬೇಕು ಇಲ್ಲಾ ಅಂದ್ರೆ ಮಾರುಕಟ್ಟೆ ಸಮಸ್ಯೆಯಿಂದ ನಾವು ಸಾಕಷ್ಟು ನಷ್ಟವನ್ನ ಹೊಂದಬೇಕಾಗುತ್ತದೆ.ಹಾಗಾಗಿ ಮದರ್ ಡೈರಿ ಜತೆ ಒಪ್ಪಂದ ಮಾಡಿಕೊಂಡ್ರೆ ಮಾತ್ರ ನಾವು ಒಪ್ಪಿಕೊಳ್ಳುತ್ತೇವೆ ಎಂದು ಅಶ್ವಥರೆಡ್ಡಿ ಗುಡಿಬಂಡೆ ಹೇಳಿದ್ದಾರೆ. ನಿರ್ದೇಶಕರಾದ ಭರಣಿ ವೆಂಕಟೇಶ್ ಮಾತನಾಡಿ, ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಜಿಲ್ಲೆಯ ಶಿಡ್ಲಘಟ್ಟ, ಬಾಗೇಪಲ್ಲಿ ಮತ್ತು ಗೌರಿಬಿದನೂರು ಶಾಸಕರನ್ನ ,ನಿರ್ದೇಶಕರನ್ನ ಕರೆಯದೆ ಕೇವಲ 2-3 ಮಾಜಿ ನಿರ್ದೇಶಕರನ್ನ ಜೊತೆಯಲ್ಲಿಟ್ಟುಕೊಂಡು ಸಿಎಂ ಬಳಿ ಸಭೆ ನಡೆಸಿ ಡೈರಿ ಇಬ್ಭಾಗಕ್ಕೆ ಕಾಂಗ್ರೆಸ್ ಶಾಸಕರಿಗೆ ಆಸಕ್ತಿ ಇಲ್ಲ ಅಂತ ಅವರ ಮೇಲೆ ಗೂಬೆ ಕೂರಿಸೋದು ಎಷ್ಟು ಸರಿ ಜಿಲ್ಲಾ ಉಸ್ತುವಾರಿ ಸಚಿವರ ತನಗೆ ಬೇಕಾದವರಿಗೊಬ್ಬರಿಗೆ ಅಧಿಕಾರ ಕೊಡಿಸೋಕೆ ಅಂತ ಇಡೀ ಡೈರಿ ಉತ್ಪಾದಕರಿಗೆ ನಷ್ಟ ಉಂಟು ಮಾಡುವುದು ಪರೋಕ್ಷವಾಗಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ವಿರುದ್ದವೂ ಕಿಡಿಕಾರಿದರು.