ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ- PSIಗೆ 14 ದಿನ ನ್ಯಾಯಾಂಗ ಬಂಧನ
ಚಿಕ್ಕಮಗಳೂರು: ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಬಂಧಿತ ಆರೋಪಿ ಸಬ್ ಇನ್‍ಸ್ಪೆಕ್ಟರ್ ಅರ್ಜುನ್ ಗೆ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.
ಪ್ರಕರಣದ ಹಿನ್ನಲೆ: ಮೇ.10ರಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಠಾಣೆಯ ಸಬ್ ಇನ್‍ಸ್ಪೆಕ್ಟರ್ ಅರ್ಜುನ್ ಪುನೀತ್ ಎನ್ನುವ ಯುವಕನೊಬ್ಬನ್ನು ಕರೆತಂದು ತಮ್ಮ ಕಸ್ಟಡಿಯಲ್ಲಿ ಇರುವ ಸಮಯದಲ್ಲಿ ಅಪಾದಿತ ವ್ಯಕ್ತಿಗೆ ಮೂತ್ರ ಕುಡಿಸಿ ಅವಮಾನವಾಗಿ ನಡೆಸಿಕೊಂಡಿದ್ದರು ಅಂತ ಕೇಸ್ ದಾಖಲು ಮಾಡಲಾಗಿತ್ತು, ಕೇಸ್ ದಾಖಲು ಆಗುತ್ತಿದ್ದ ಹಾಗೇ ಆರೋಪಿ ಸಬ್ ಇನ್‍ಸ್ಪೆಕ್ಟರ್ ಅರ್ಜುನ್ ತಲೆ ಮರೆಸಿಕೊಂಡಿದ್ದರು, ಈ ನಡುವೆ ಜಾಮೀನಿಗಾಗಿ ಅರ್ಜಿಯನ್ನು ಕೂಡ ಸಲ್ಲಿಸಿದ್ದರು, ಆದರೆ ಅವರ ಅರ್ಜಿ ಮಾನ್ಯವಾಗಲಿಲ್ಲ. ಅಕ್ಟೋಬರ್ 1ರ ಬುಧವಾರ ರಾತ್ರಿ ಸಿಐಡಿ ಪೊಲೀಸರು ಅರ್ಜುನ್ ರನ್ನ ಬೆಂಗಳೂರಿನಲ್ಲಿ ಬಂಧಿಸಿದ್ದ ಬಳಿಕ ಸಿ.ಐ.ಡಿ. ಪೊಲೀಸರು ಇಂದು ಚಿಕ್ಕಮಗಳೂರು ಕೋರ್ಟ್ ಗೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶೆ ಪುಷ್ಪಾಂಜಲಿ ಅವರು ಆರೋಪಿ ಅರ್ಜುನ್ ಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.