ವಾಯ್ಸ್​ ಮೆಸೇಜ್​ ಮಾಡಿ ಕಾರಿನ ಸಮೇತ ಭದ್ರಾ ನಾಲೆಗೆ ಧುಮುಕಿದ ಒಂದೇ ಕುಟುಂಬದ ನಾಲ್ವರು..!

ವಾಯ್ಸ್​ ಮೆಸೇಜ್​ ಮಾಡಿ ಕಾರಿನ ಸಮೇತ ಭದ್ರಾ ನಾಲೆಗೆ ಧುಮುಕಿದ ಒಂದೇ ಕುಟುಂಬದ ನಾಲ್ವರು..!

ವಾಯ್ಸ್​ ಮೆಸೇಜ್​ ಮಾಡಿ ಕಾರಿನ ಸಮೇತ ಭದ್ರಾ ನಾಲೆಗೆ ಧುಮುಕಿದ ಒಂದೇ ಕುಟುಂಬದ ನಾಲ್ವರು..!

ಚಿಕ್ಕಮಗಳೂರು: ವಾಯ್ಸ್ ಮೆಸೇಜ್ ಮಾಡಿ ಒಂದೇ ಕುಟುಂಬದ ನಾಲ್ವರು ಕಾರಿನ ಸಮೇತ ಭದ್ರಾ ನಾಲೆಗೆ ಬಿದ್ದ ಘಟನೆ ತರೀಕೆರೆ ತಾಲೂಜಿನ ಎಂ.ಸಿ. ಹಳ್ಳಿ ಬಳಿ ಗುರುವಾರ ಬೆಳಗ್ಗೆ ನಡೆದ ಬಗ್ಗೆ ವರದಿಯಾಗಿದೆ.

ಭದ್ರಾವತಿ ತಾಲೂಕಿನ ಹಳೇ ಜೇಡಿಕಟ್ಟೆ ಗ್ರಾಮದ ಇವರೆಲ್ಲರೂ ಕಾರು ಸಮೇತ ನಾಲೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾಲ್ವರಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಮತ್ತಿಬ್ಬರು ನೀರಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಪತಿ ಮಂಜು, ಅತ್ತೆ ಸುನಂದಮ್ಮ ನೀರು ಪಾಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ನೀತು (35) ಮತ್ತು ಇವರ ಪುತ್ರ ಧ್ಯಾನ್ (13) ಅಪಾಯದಿಂದ ಪಾರಾಗಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ ಭದ್ರಾವತಿ ತಾಲೂಕಿನ ಹಳೇ ಜೆ.ಡಿ.ಕಟ್ಟೆಯವರು. ಸದ್ಯ ತರೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನಾಲ್ವರು ಸ್ವಿಫ್ಟ್ ಕಾರಿನ ಸಮೇತ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ನಾಲ್ವರು ಯಾವ ಕಾರಣಕ್ಕೆ ಸಾಯಲು ನಿರ್ಧರಿಸಿದ್ದರು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ, ಸಾಯುವುದಾಗಿ ಸಂಬಂಧಿಕರಿಗೆ ವಾಯ್ಸ್​ ಮೆಸೇಜ್​ ಕಳುಹಿಸಿದ್ದರು ಎನ್ನಲಾಗಿದೆ.