ಸರ್ಕಾರಿ ಉದ್ಯೋಗಿಗಳು ನಿರ್ಲಕ್ಷ್ಯ ತೋರಿದರೆ ಕ್ರಮ; ಕೇಂದ್ರದ ಎಚ್ಚರಿಕೆ

ಸರ್ಕಾರಿ ಉದ್ಯೋಗಿಗಳು ನಿರ್ಲಕ್ಷ್ಯ ತೋರಿದರೆ ಕ್ರಮ; ಕೇಂದ್ರದ ಎಚ್ಚರಿಕೆ

ಸರ್ಕಾರಿ ಕೆಲಸ ಅಂತ ಬೇಕಾಬಿಟ್ಟಿ ಕೆಲಸ ಮಾಡುವವರಿಗೆ ಕೇಂದ್ರ ಶಾಕ್‌ ನೀಡಿದೆ. ಸರಿಯಾಗಿ ಕೆಲಸ ಮಾಡದಿದ್ದರೆ ನಿವೃತ್ತಿಯ ನಂತರದ ಪಿಂಚಣಿ ಮತ್ತು ಗ್ರಾಚ್ಯುಟಿಗೆ ಕತ್ತರಿ ಹಾಕುವ ನಿಯಮವೊಂದರ ಬಗ್ಗೆ ಕೇಂದ್ರ ಅಧಿಸೂಚನೆ ಹೊರಡಿಸಿದೆ. ಹೊಸ ನಿಯಮಗಳ ಪ್ರಕಾರ ನೌಕರನು ಕೆಲಸದಲ್ಲಿ ನಿರ್ಲಕ್ಷ್ಯ ತೋರಿದರೆ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ಈ ಆದೇಶವು ಕೇಂದ್ರ ಉದ್ಯೋಗಿಗಳಿಗೆ ಅನ್ವಯಿಸುತ್ತದೆ. ಮುಂದೆ ರಾಜ್ಯಗಳು ಸಹ ಈ ನಿಯಮವನ್ನು ಜಾರಿಗೆ ತರಬಹುದು.