ರಿಸರ್ವ್‌ ಎಸ್‌ಐ ನೇಮಕಾತಿ ಪರೀಕ್ಷೆಗೆ ಡೇಟ್ ಫಿಕ್ಸ್

ರಿಸರ್ವ್‌ ಎಸ್‌ಐ ನೇಮಕಾತಿ ಪರೀಕ್ಷೆಗೆ ಡೇಟ್ ಫಿಕ್ಸ್

ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ (ಕೆಎಸ್‌ಆರ್‌ಪಿ-ಐಆರ್‌ಬಿ) ಖಾಲಿ ಇರುವ 70 ರಿಸರ್ವ್ ಸಬ್‌ ಇನ್‌ಸ್ಪೆಕ್ಟರ್‌ (ಆರ್‌ಎಸ್‌ಐ) ಹುದ್ದೆಗಳ ಭರ್ತಿಗಾಗಿ ಡಿ. 18ರಂದು ಲಿಖಿತ ಪರೀಕ್ಷೆಗಳು ನಡೆಯಲಿವೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿ ಕಮಲ್ ಪಂತ್, 'ಬೆಳಿಗ್ಗೆ 11ರಿಂದ 12 ಗಂಟೆವರೆಗೆ ಪತ್ರಿಕೆ–1 (ಪ್ರಬಂಧ, ಭಾಷಾಂತರ, ಸಾರಾಂಶ ಬರಹ) ಹಾಗೂ ಮಧ್ಯಾಹ್ನ 2ರಿಂದ 3.30 ಗಂಟೆವರೆಗೆ ಪತ್ರಿಕೆ–2 (ಸಾಮಾನ್ಯ ಅಧ್ಯಯನ) ಪರೀಕ್ಷೆಗಳು ನಡೆಯಲಿವೆ' ಎಂದು ತಿಳಿಸಿದ್ದಾರೆ.