ದೆಹಲಿಯ ಗಣರಾಜ್ಯೋತ್ಸವದ ಪೆರೇಡ್'ಗೆ ಬಿಗಿ ಭದ್ರತೆ

ದೆಹಲಿಯ ಗಣರಾಜ್ಯೋತ್ಸವದ ಪೆರೇಡ್'ಗೆ ಬಿಗಿ ಭದ್ರತೆ

ನವದೆಹಲಿ, ಜ.24- ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸುವವರು ಕೋವಿಡ್ ಲಸಿಕೆಯ ಪೂರ್ಣ ಪ್ರಮಾಣದ ಡೋಸ್ಗ್ಳನ್ನು ಪಡೆದಿರಬೇಕು ಮತ್ತು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ ಎಂದು ದೆಹಲಿ ಪೊಲೀಸರು ಮಾರ್ಗಸೂಚಿ ಹೊರಡಿಸಿದ್ದಾರೆ.

ಜನವರಿ 26 ರಂದು ರಾಜ್‌ ಪಥ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಸ್ಕ ಧಾರಣೆ ಮತ್ತು ವ್ಯಕ್ತಿಗತ ಅಂತರ ಪಾಲನೆ ಕಡ್ಡಾಯ. ಕಾರ್ಯಕ್ರಮಕ್ಕೆ ಆಗಮಿಸುವವರು ಲಸಿಕೆ ಪಡೆದ ಪ್ರಮಾಣಪತ್ರವನ್ನು ತರಲು ವಿನಂತಿಸಲಾಗಿದೆ ಎಂದು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಸಂದರ್ಶಕರಿಗಾಗಿ ಬೆಳಿಗ್ಗೆ 7 ಗಂಟೆಗೆ ಪ್ರವೇಶ ಮುಕ್ತಗೊಳಿಸಲಾಗುತ್ತದೆ. ಪಾರ್ಕಿಂಗ್ ಸೀಮಿತವಾಗಿದೆ, ಅದಕ್ಕಾಗಿ ಸಂದರ್ಶಕರು ಕಾರ್‌ ಪೂಲ್ ಅಥವಾ ಟ್ಯಾಕ್ಸಿ ಬಳಸಬೇಕು. ಮಾನ್ಯವಾದ ಗುರುತಿನ ಚೀಟಿ ತರಬೇಕು, ಭದ್ರತಾ ತಪಾಸಣೆಯ ಸಮಯದಲ್ಲಿ ಸಿಬ್ಬಂದಿಗಳೊಂದಿಗೆ ಸಹಕರಿಸಬೇಕು ಎಂದು ಪೊಲೀಸರು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.

ಗಣರಾಜ್ಯೋತ್ಸವದ ಭದ್ರತಾ ವ್ಯವಸ್ಥೆಯಲ್ಲಿ, 71 ಡಿಸಿಪಿಗಳು, 213 ಎಸಿಪಿಗಳು ಮತ್ತು 753 ಇನ್ಸ್‌ಪೆಕ್ಟರ್‌ಗಳು ಸೇರಿದಂತೆ 27,723 ದೆಹಲಿ ಪೊಲೀಸ್ ಸಿಬ್ಬಂದಿಯನ್ನು ಭದ್ರತಾ ಕರ್ತವ್ಯಗಳಿಗಾಗಿ ನಿಯೋಜಿಸಲಾಗಿದೆ. ಸಿಆರ್ಪಿನಎಫ್‌ ನ 65 ಕಂಪನಿಗಳು ನಿಯೋಜನೆಗೊಂಡಿವೆ ಎಂದು ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನಾ ತಿಳಿಸಿದ್ದರು.

ಏರ್ ಸ್ಪೇಸ್ ಭದ್ರತೆಗಾಗಿ ಕೌಂಟರ್ ಡ್ರೋನ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ದೆಹಲಿ ಪೊಲೀಸರು ಮತ್ತು ಇತರ ಏಜೆನ್ಸಿಗಳ ಸಹಾಯದಿಂದ ಗಣರಾಜ್ಯೋತ್ಸವ ಆಚರಣೆ ನಡೆಯುವ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ಭದ್ರತೆಯನ್ನು ಸಹ ಭದ್ರತೆ ಮಾಡಲಾಗಿದೆ ಎಂದು ಅಸ್ತಾನಾ ಹೇಳಿದ್ದಾರೆ.