ಹಲಾಲ್ ಮುಕ್ತ ದೀಪಾವಳಿ ಅಭಿಯಾನ ಕುರಿತು ಜಮೀರ್ ಅಹ್ಮದ್ ಹೇಳಿದ್ದೇನು..?

ಹುಬ್ಬಳ್ಳಿ, ಅ.22- ದೀಪಾವಳಿ ಹಬ್ಬದಲ್ಲಿ ಹಲಾಲ್ ಬ್ಯಾನ್ ಕುರಿತು ಹೇಳಲಿಕ್ಕೆ ಅವರು ಯಾರು? ಯಾರೋ ಒಬ್ಬರು ಹೇಳಿದ ತಕ್ಷಣ ಹಲಾಲ್ ಖರೀದಿ ಯಾರೂ ಬಿಡುವುದಿಲ್ಲ. ಇಂತಹ ಹೇಳಿಕೆಗಳ ಮೂಲಕ ಅವರು ತಮ್ಮ ತಮ್ಮ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಹೇಳಿದರು.
ಹಿಂದೂ ಸಂಘಟನೆಗಳಿಂದ ಹಲಾಲ್ ಮುಕ್ತ ದೀಪಾವಳಿ ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರೋ ಹೇಳಿದ ತಕ್ಷಣ ಯಾರು ಖರೀದಿ ಮಾಡುವುದು ಬಿಡುವುದಿಲ್ಲ. ಬನ್ನಿ ನಾನು ನಮಾಜ್ ಮಾಡಿದ ನಂತರ ತಮ್ಮ ಜೊತೆಗೆ ಬರುತ್ತೇನೆ. ಎಲ್ಲಿಯೂ ಹಲಾಲ್ ಹಾಗೂ ಮುಸ್ಲಿಮರು ಮಾರುವ ವಸ್ತುಗಳನ್ನು ಖರೀದಿಸುವುದನ್ನ ಬಿಟ್ಟಿಲ್ಲ ಎಂದರು.
ರಾಹುಲ್ ಗಾಂಧಿ ಅವರ ಭಾರತ ಜೋಡೋ ಬಿಜಿಪಿಗರಿಗೆ ಭಯ ಹುಟ್ಟಿಸಿದೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಸಹ ಜನಸಂಕಲ್ಪ ಯಾತ್ರೆ ನಡೆಸಿದ್ದಾರೆ ಎಂದು ಲೇವಡಿ ಮಾಡಿದರು. ಇದೊಂದು ಕಾಂಗ್ರೆಸ್ ಗೆ ಮರೆಯಲಾಗದ ಪಾದಯಾತ್ರೆ.
ಖರ್ಗೆ ಆಯ್ಕೆ ಸ್ವಾಗತಾರ್ಹ: ಖರ್ಗೆ ಅವರು ಅಧ್ಯಕ್ಷರಾಗಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಅವರೊಬ್ಬ ಹಿರಿಯ ರಾಜಕಾರಣಿ ಅನುಭವಿ ರಾಜಕಾರಣಿ ಅವರ ಆಯ್ಕೆ ಸಂತಸ ತಂದಿದೆ. ಅವರ ಮಾರ್ಗದರ್ಶನ ಪಕ್ಷಕ್ಕೆ ಅಗತ್ಯವಿತ್ತು. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯನ್ನು ಸ್ವಾಗತ ಮಾಡುತ್ತೇವೆ ಎಂದು ಜಮೀರ್ ಹೇಳಿದರು.
ವರುಣಾ ಕ್ಷೇತ್ರ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ವಿಚಾರ: ರಾಜ್ಯದ ಅಭಿವೃದ್ದಿಗಾಗಿ ಸಿದ್ಧರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟು ಕೊಡುವೆ. ರಾಜ್ಯಕ್ಕೆ ಒಳ್ಳೆದಾಗುವ ದೃಷ್ಠಿಯಿಂದ ನಾನು ನನ್ನ ಕ್ಷೇತ್ರವನ್ನ ತ್ಯಾಗ ಮಾಡಲು ಸಿದ್ಧವಾಗಿದ್ದೇನೆ. ಕಾಂತಾರ ಸಿನಿಮಾ ಕುರಿತ ವಿವಾದ ವಿಚಾರ. ನಾನು ಇನ್ನೂ ಆ ಸಿನಿಮಾ ನೋಡಿಲ್ಲ ಅದರ ಬಗ್ಗೆ ನನಗೆ ಏನೂ ಮಾಹಿತಿ ಗೊತ್ತಿಲ್ಲ. ಬೆಂಗಳೂರಿಗೆ ತೆರಳಿದ ನಂತರ ಸಿನಿಮಾ ನೋಡಿ ಅಭಿಪ್ರಾಯ ತಿಳಿಸುತ್ತೇನೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.