ಗೃಹಸಾಲ'ಕ್ಕೆ ಕಟ್ಟುತ್ತಿರುವ 'EMI' ಯಿಂದ ಮುಕ್ತರಾಗಲು ಈ ಸುಲಭ ವಿಧಾನಗಳನ್ನು ಅನುಸರಿಸಿ!

ಗೃಹಸಾಲ'ಕ್ಕೆ ಕಟ್ಟುತ್ತಿರುವ 'EMI' ಯಿಂದ ಮುಕ್ತರಾಗಲು ಈ ಸುಲಭ ವಿಧಾನಗಳನ್ನು ಅನುಸರಿಸಿ!

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಸ್ವಂತ ಮನೆ ಪ್ರತಿಯೊಬ್ಬರ ಕನಸು. ಆದರೆ ಅದನ್ನು ಖರೀದಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನೆ ಖರೀದಿಗೆ ಹಣದ ಕೊರತೆ ನೀಗಿಸಲು ಜನರು ಗೃಹ ಸಾಲದ ಮೊರೆ ಹೋಗುತ್ತಾರೆ. ಬ್ಯಾಂಕ್ ಗಳು ನಿಗದಿತ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತವೆ.

ಇದಕ್ಕಾಗಿ ಪ್ರತಿ ತಿಂಗಳ ನಂತರ EMI ಪಾವತಿಸಬೇಕಾಗುತ್ತದೆ.

ಸಾಮಾನ್ಯವಾಗಿ EMI ನಲ್ಲಿ ಸಾಲ ಪಡೆದರೆ ಬಹಳ ದಿನಗಳವರೆಗೆ ಕಟ್ಟಬೇಕಾಗುತ್ತದೆ. ಕೆಲವೊಮ್ಮೆ ಹೊರೆಯಾಗುತ್ತದೆ. ಆದರೆ ನಾವಿಲ್ಲಿ ಹೇಳುವ ಕೆಲವು ಕ್ರಮಗಳನ್ನು ಅನುಸರಿಸಿದ್ರೆ ಗೃಹ ಸಾಲವನ್ನು ತ್ವರಿತವಾಗಿ ಮರುಪಾವತಿ ಮಾಡಬಹುದು

ಗೃಹ ಸಾಲವನ್ನು ತ್ವರಿತವಾಗಿ ಪಾವತಿಸುವುದು ಹೇಗೆ?

ಪ್ರತಿವರ್ಷ ಹೆಚ್ಚುವರಿ ಠೇವಣಿ

ಮನೆ ಸಾಲವನ್ನು ಮುಂಚಿತವಾಗಿ ಮರುಪಾವತಿಸಲು ಪ್ರತಿವರ್ಷ ಹೆಚ್ಚುವರಿ 5% ಸಾಲದ ಬಾಕಿಯನ್ನು ಠೇವಣಿ ಮಾಡಲು ಪ್ರಾರಂಭಿಸಿ. ಹೀಗೆ ಮಾಡುವುದರಿಂದ ಅಸಲು ಹಣದ ಮೊತ್ತ ಕಡಿಮೆಯಾಗುತ್ತದೆ. 20 ವರ್ಷಗಳ ಸಾಲವನ್ನು 12 ವರ್ಷಗಳಲ್ಲಿ ಪೂರ್ಣಗೊಳಿಸಬಹುದು.

ಹೆಚ್ಚುವರಿ EMI ಪಾವತಿಸಿ

ನೀವು ಹೋಮ್ ಲೋನ್ ಅನ್ನು ಮೊದಲೇ ಮುಚ್ಚಲು ಬಯಸಿದರೆ, 12 ರ ಬದಲಿಗೆ ಒಂದು ವರ್ಷದಲ್ಲಿ 13 EMI ಗಳನ್ನು ಪಾವತಿಸಬಹುದು. ಪ್ರತಿವರ್ಷ ಇನ್ನೂ ಒಂದು EMI ಮೊತ್ತವನ್ನು ಠೇವಣಿ ಮಾಡುವ ಮೂಲಕ ನೀವು 20 ವರ್ಷಗಳ ಸಾಲವನ್ನು 17 ವರ್ಷಗಳಲ್ಲಿ ಮುಗಿಸಬಹುದು.