ದ್ವಿತೀಯ ಪಿಯುಸಿ ದಾಖಲಾತಿ ದಿನಾಂಕ ವಿಸ್ತರಣೆ
ದ್ವಿತೀಯ ಪಿಯುಸಿ ದಾಖಲಾತಿ ದಿನಾಂಕ ವಿಸ್ತರಣೆ
ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ದಾಖಲಾತಿಗೆ ಶುಕ್ರವಾರ ಕೊನೆಗೊಂಡAತ ದಾಖಲಾತಿ ದಿನಾಂಕವನ್ನು, ಯಾವುದೇ ದಂಡ ಶುಲ್ಕವಿಲ್ಲದೇ ಆಗಸ್ಟ್ ೨೮ರ ವರೆಗೆ ವಿಸ್ತರಿಸಲಾಗಿದೆ.
ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿಗೆ ದ್ವಿತೀಯ ಪಿಯುಸಿ ದಾಖಲಾತಿಯನ್ನು ದಂಡ ಶುಲ್ಕವಿಲ್ಲದೆ ದಿನಾಂಕ ೧೩-೦೮-೨೦೨೧ರವರೆಗೆ ನಿಗದಿ ಪಡಿಸಲಾಗಿತ್ತು.
ಆದರೆ ಪೋಷಕರು, ಪ್ರಾಂಶುಪಾಲರ ಸಂಘದ ಪದಾಧಿಕಾರಿಗಳು, ಸರ್ಕಾರಿ ಮತ್ತು ಅನುದಾನಿತ ಪ್ರಾಂಶುಪಾಲರು ಮುಂತಾದವರು ಇಲಾಖೆಯನ್ನು ಸಂಪರ್ಕಿಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ದಾಖಲಾತಿ ಆಗಿಲ್ಲವೆಂದು ತಿಳಿಸಿ, ದಂಡ ಶುಲ್ಕವಿಲ್ಲದೆ ದಾಖಲಾತಿ ದಿನಾಂಕವನ್ನು ವಿಸ್ತರಿಸುವಂತೆ ಕೋರಿದ್ದರು.
ಹೀಗಾಗಿ ಯಾವುದೇ ದಂಡ ಶುಲ್ಕವಿಲ್ಲದೇ ದ್ವಿತೀಯ ಪಿಯುಸಿಗೆ ದಾಖಲಾಗಲು ೨೮-೦೮-೨೦೨೧ರವರೆಗೆ ವಿಸ್ತರಿಸಲಾಗಿದೆ. ವಿಳಂಬ ದಾಖಲಾತಿ ಶುಲ್ಕ ೬೭೦ ರೂ.ಗಳನ್ನು ಪಾವತಿಸಿ ದಾಖಲಾಗಲು ದಿನಾಂಕ ೩೦-೦೮-೨೦೨೧ ರಿಂದ ೧೧-೦೯-೨೦೨೧ರ ವರೆಗೆ ಅವಕಾಶವಿದೆ. ವಿಶೇಷ ದಂಡ ಶುಲ್ಕ ರೂ.೨,೮೯೦ ಪಾವತಿಯೊಂದಿಗೆ ದಿನಾಂಕ ೧೩-೦೯-೨೦೨೧ ರಿಂದ ೨೫-೦೯-೨೦೨೧ರ ವರೆಗೆ ದಾಖಲಾತಿಗೆ ಅವಕಾಶವಿದೆ ಎಂದು ತಿಳಿಸಿದ್ದಾರೆ