ಅಚ್ಚರಿಯ ರೀತಿಯಲ್ಲಿ ಮಾತುಕತೆ ನಡೆಸಿದ ಉತ್ತರ ಹಾಗೂ ದಕ್ಷಿಣ ಕೊರಿಯಾ

ಅಚ್ಚರಿಯ ರೀತಿಯಲ್ಲಿ ಮಾತುಕತೆ ನಡೆಸಿದ ಉತ್ತರ ಹಾಗೂ ದಕ್ಷಿಣ ಕೊರಿಯಾ

ಸಿಯೋಲ್: ಬದ್ಧದ್ವೇಷಿಗಳಂತಿದ್ದ ಉತ್ತರ-ದಕ್ಷಿಣ ಕೊರಿಯಾಗಳು ಅಚ್ಚರಿಯ ರೀತಿಯಲ್ಲಿ ಮಾತುಕತೆಯನ್ನು ಪುನಾರಂಭ ಮಾಡಿವೆ.

ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಮಾತುಕತೆಯನ್ನು ಪುನಾರಂಭ ಮಾಡಲು ನಿರ್ಧರಿಸಿರುವುದನ್ನು ಉಭಯ ದೇಶಗಳ ನಾಯಕರು ಜು.27 ರಂದು ಘೋಷಿಸಿದ್ದಾರೆ. ಕೊರಿಯಾ ಯುದ್ಧ ಅಂತ್ಯಗೊಂಡ ದಿನದ ವಾರ್ಷಿಕ ನೆನಪಿನ ದಿನದಂದೇ ಈ ಘೋಷಣೆಯಾಗಿರುವುದು ಅಚ್ಚರಿ ಮೂಡಿಸಿದೆ.

2018 ರಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾಗೆ ಭೇಟಿ ನೀಡಿ ಉತ್ತರ ಕೊರಿಯಾ-ದಕ್ಷಿಣ ಕೊರಿಯಾದ ಅಧ್ಯಕ್ಷರುಗಳಾದ ಕಿಮ್ ಜಾಂಗ್ ಉನ್ ಹಾಗೂ ಮೂನ್ ಜೇ-ಇನ್ ಐತಿಹಾಸಿಕ ದ್ವಿಪಕ್ಷೀಯ ಮಾತುಕಗೆ ಚಾಲನೆ ನೀಡಿದ್ದರು. ಆದರೆ ಮಹತ್ತರವಾದದ್ದನ್ನು ಸಾಧಿಸಲು ವಿಫಲರಾಗಿ ದ್ವಿಪಕ್ಷೀಯ ಮಾತುಕತೆ ಮುರಿದುಬಿದ್ದಿತ್ತು.