ಐಡಾ ಚಂಡಮಾರುತ: ನ್ಯೂಜೆರ್ಸಿಯಲ್ಲಿ 45ಕ್ಕೂ ಹೆಚ್ಚು ಸಾವು

ಐಡಾ ಚಂಡಮಾರುತ: ನ್ಯೂಜೆರ್ಸಿಯಲ್ಲಿ 45ಕ್ಕೂ ಹೆಚ್ಚು ಸಾವು

ನ್ಯೂಯಾರ್ಕ್‌: ಅಮೆರಿಕದ ನ್ಯೂಯಾರ್ಕ್‌ನ ಈಶಾನ್ಯ ಭಾಗದಲ್ಲಿ 'ಐಡಾ' ಚಂಡಮಾರುತ ಹಾಗೂ ನಂತರದ ಧಾರಾಕಾರ ಮಳೆಯ ಪರಿಣಾಮಗಳಿಂದ 45ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ನ್ಯೂಜೆರ್ಸಿಯಲ್ಲಿ 23 ಮಂದಿ ಮೃತಪಟ್ಟಿದ್ದಾರೆ ಎಂದು ಗವರ್ನರ್‌ ಫಿಲ್‌ ಮರ್ಫಿ ತಿಳಿಸಿದ್ದಾರೆ.

ನ್ಯೂಯಾರ್ಕ್‌ ನಗರದಲ್ಲೇ 13 ಜನ ಸತ್ತಿದ್ದು, ನೆಲಮಹಡಿಯಲ್ಲಿ ನೀರು ಆವರಿಸಿ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.