ಪರಿಷತ್ ಫೈಟ್: ಬೀದರ್ ನಲ್ಲಿ ಜಯ ಸಾಧಿಸಿದ ಕಾಂಗ್ರೆಸ್ ನ ಭೀಮರಾವ್ ಪಾಟೀಲ
ಬೀದರ್: ಡಿ.10ರಂದು ನಡೆದಿದ್ದ ಬೀದರ್ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ ಅವರು ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ವಿರುದ್ಧ ಗೆಲುವು ಸಾಧಿಸಿದ್ದಾರೆ. ಭೀಮರಾವ್ ಪಾಟೀಲ ಅವರು ಬಿಜೆಪಿ ಅಭ್ಯರ್ಥಿ ವಿರುದ್ಧ 227 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಘೋಷಣೆ ಮಾಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ ಅವರು 1789 ಮತಗಳನ್ಮು ಪಡೆದರೆ, ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ 1562 ಮತಗಳನ್ನು ಪಡೆದಿದ್ದಾರೆ. ಆಮ್ ಆದಿ ಪಕ್ಷದ ಗೋವಿಂದರಾವ್ ಸೋಮವಂಶಿ 15 ಮತಗಳನ್ಮು ಪಡೆದಿದ್ದಾರೆ. ಒಟ್ಟು 3450 ಮತದರಾರು ಹಕ್ಕು ಚಲಾಯಿಸಿದ್ದು, ಅದರಲ್ಲಿ 84 ಮತಗಳು ತಿರಸ್ಕೃತಗೊಂಡಿವೆ.