ಸಕ್ಕರೆ ಕಾರ್ಖಾನೆ ಬೀಗ ಹಾಕಲು ಯತ್ನಿಸಿದ ರೈತರು

ಬೀದರ್ 

ಕೃಷಿ ಕಾಯ್ದೆ ಹಾಗೂ ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಬೀದರ್ ತಾಲೂಕಿನ ಜನವಾಡ ಬಳಿ ಇರುವ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಬೀಗ ಹಾಕಲು ನೂರಾರು ರೈತರು ಯತ್ನಿಸಿದರು. ಈ ವೇಳೆ ರೈತರ ಕೈಯಲ್ಲಿದ್ದ ಬೀಗವನ್ನು ಪೊಲೀಸರು ಕಸಿದುಕೊಳ್ಳಲು ಯತ್ನಿಸಿದಾಗ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಆದರೂ ಪಟ್ಟು ಬಿಡದ ರೈತರು ಮತ್ತೆ ಕಾರ್ಖಾನೆ ಮುಂಭಾಗ ಧರಣಿ ಕುಳಿತು ಕಾರ್ಖಾನೆ ಅಧ್ಯಕ್ಷರನ್ನು ಸ್ಥಳಕ್ಕೆ ಕರೆಸುವಂತೆ ಒತ್ತಾಯಿಸಿದರು.