ಟಿ-೨೦ ವಿಶ್ವಕಪ್ ವೇಳಾಪಟ್ಟಿ ಪ್ರಕಟ : ಅ.೨೪ಕ್ಕೆ ಭಾರತ-ಪಾಕ್ ಕ್ರಿಕೆಟ್ ಯುದ್ಧ
ಟಿ-೨೦ ವಿಶ್ವಕಪ್ ವೇಳಾಪಟ್ಟಿ ಪ್ರಕಟ : ಅ.೨೪ಕ್ಕೆ ಭಾರತ-ಪಾಕ್ ಕ್ರಿಕೆಟ್ ಯುದ್ಧ
ಮುಂಬೈ: ತೀವ್ರ ಕುತೂಹಲ ಮೂಡಿಸಿದ್ದ ಚುಟುಕು ವಿಶ್ವಕಪ್ ವೇಳಾಪಟ್ಟಿಯು ಪ್ರಕಟಗೊಂಡಿದ್ದು ಅಕ್ಟೋಬರ್ ೧೭ ರಿಂದ ನವೆಂಬರ್ ೧೪ ರವರೆಗೆ ನಡೆಯಲಿದೆ ಎಂದು ಐಸಿಸಿ ಪ್ರಕಟಿಸಿದೆ. ೨೦೨೦ರಲ್ಲೇ ನಡೆಯಬೇಕಾಗಿದ್ದ ಚುಟುಕು ವಿಶ್ವಕಪ್ ಅನ್ನು ಕೊರೊನಾ ಕಾಟದಿಂದ ಮುಂದೂಡಲಾಗಿತ್ತದೆ ಭಾರತದಲ್ಲೇ ನಡೆಯಬೇಕಾಗಿದ್ದ ಚುಟುಕು ವಿಶ್ವಕಪ್ ಅನ್ನು ಯುಎಇಗೆ ಸ್ಥಳಾಂತರಿಸಲಾಗಿದೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಒಟ್ಟು ೧೨ ತಂಡಗಳು ಪಾಲ್ಗೊಳ್ಳುತ್ತಿದ್ದು ಭಾರತ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ ಸೇರಿದಂತೆ ೮ ತಂಡಗಳು ನೇರವಾಗಿ ಅರ್ಹತೆ ಪಡೆದು ಕೊಂಡಿದ್ದರೆ, ಎರಡು ಗುಂಪುಗಳಾಗಿ ನಡೆಯುವ ಅರ್ಹತಾ ಪಂದ್ಯಗಳಿAದ ಒಟ್ಟು ೪ ತಂಡಗಳು ವಿಶ್ವಕಪ್ ಆಡಲು ಬಳಗವನ್ನು ಕೂಡಿಕೊಳ್ಳಲಿದೆ. ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಹೈವೋಲ್ಟೇಜ್ ಪಂದ್ಯವೆAದೇ ಬಿಂಬಿಸಿಕೊಳ್ಳುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಅಕ್ಟೋಬರ್ ೨೪ ರಂದು ನಡೆಯಲಿದೆ. ಸೀಮಿತ ಓವರ್‌ಗಳ ವಿಶ್ವಕಪ್‌ನಲ್ಲಿ ಉಂಟಾದ ಗೊಂದಲ ನಿವಾರಿಸಿಕೊಳ್ಳುವ ಸಲುವಾಗಿ ಈ ಬಾರಿ ಫೈನಲ್ ಪಂದ್ಯಕ್ಕೆ ಮೀಸಲು ದಿನವನ್ನು ಮೀಸಲಿಡಲಾಗಿದೆ. ನವೆಂಬರ್ ೧೪ರಂದು ಫೈನಲ್ ಪಂದ್ಯ ನಡೆಯಲಿದ್ದು ಅಂದು ಏನಾದರೂ ಫಲಿತಾಂಶ ದೊರೆಯದಿದ್ದರೆ ೧೫ ರಂದು ಮೀಸಲು ದಿನವಾಗಿಡಲಾಗಿದೆ.
ಭಾರತ ತಂಡದ ಪಂದ್ಯಗಳ ವಿವರ:
ಅಕ್ಟೋಬರ್ ೨೪- ಪಾಕಿಸ್ತಾನ- ೬ ಗಂಟೆಗೆ- ದುಬೈ
ಅಕ್ಟೋಬರ್ ೩೧- ನ್ಯೂಜಿಲ್ಯಾಂಡ್- ೬ ಗಂಟೆಗೆ- ದುಬೈ
ನವೆಂಬರ್ ೩- ಆಫ್ಘಾನಿಸ್ತಾನ- ೬ ಗಂಟೆಗೆ- ಅಬುದಾಬಿ
ನವೆಂಬರ್ ೫- ಬಿ ೧ ಕ್ವಾಲಿಫೈಯರ್- ೬ ಗಂಟೆಗೆ- ದುಬೈ
ನವೆಂಬರ್ ೮- ಎ೨ ಕ್ವಾಲಿಫೈಯರ್- ೬ಗಂಟೆಗೆ- ದುಬೈ.