ಊಟ ನೀಡುವ ವಿಚಾರಕ್ಕೆ ಹಾಸ್ಟೆಲ್ ವಾಡ್೯ನ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಬೀದರ್ ನ ನೌಬಾದ್ ಬಳಿ ನಡೆದಿದೆ
ಊಟ ನೀಡುವ ವಿಚಾರಕ್ಕೆ ಹಾಸ್ಟೆಲ್ ವಾಡ್೯ನ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಬೀದರ್ ನ ನೌಬಾದ್ ಬಳಿ ಇರುವ ಬಾಲಕರ ವಸತಿ ನಿಲಯದಲ್ಲಿ ನಡೆದಿದೆ... ಹಲ್ಲೆ ಖಂಡಿಸಿ ಹಾಸ್ಟೆಲ್ ನಲ್ಲೆ ನೂರಾರು ವಿದ್ಯಾರ್ಥಿಗಳು ಧರಣಿ ಕುಳಿತು ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳು ಬೇಕೇ ಬೇಕು ನ್ಯಾಯಬೇಕು ಎಂದು ಪ್ರತಿಭಟನೆ ಮಾಡುತ್ತಾ ಪಟ್ಟು ಹಿಡಿದ್ದಾರೆ... ಈಶ್ವರ್ ಬಬಲಾ ಎಂಬ ವಾಡ್೯ನಿಂದ ಹಲ್ಲೆ ಆರೋಪ ಕೇಳಿ ಬರುತ್ತಿದ್ದು ವಾಡ್೯ನ ವಿರುದ್ಧ ಧಿಕ್ಕಾರ ಕೂಗಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ... ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಮೇಟ್ರೀಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಘಟನೆಯಾಗಿದ್ದು ಸುಮಾರು 4 ತಿಂಗಳಿನಿಂದ ವಸತಿ ನಿಲಯದಲ್ಲಿ ವಾಡ್೯ನ ಆಗಿ ಕೆಲಸ ಮಾಡುತ್ತಿರುವ ಈಶ್ವರ್ ಬಬಲಾದ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ... ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆಯ ತಾಲೂಕಾಧಿಕಾರಿ ಅನೀಲ್ ಕುಮಾರ್ ಮೇಲ್ಡೊಡಿ ಭೇಟಿ ನೀಡಿ ಪ್ರತಿಭಟನೆ ಮಾಡದಂತ್ತೆ ವಿದ್ಯಾರ್ಥಿಗಳಿಗೆ ಮನವೋಲಿಸಿದ್ದಾರೆ.