ಡಿ.22ಕ್ಕೆ ವಿಶಾಲ್ ನಟನೆಯ 'ಲಾಠಿ' ತೆರೆಗೆ

ಖ್ಯಾತ ತಮಿಳು ನಟ ವಿಶಾಲ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಲಾಠಿ ಡಿ.22 ರಂದು ಕನ್ನಡ ಸೇರಿದಂತೆ ನಾಲ್ಕು ಭಾಷೆಯಲ್ಲಿ ಬಿಡುಗಡೆ ಆಗಲಿದೆ ಎಂದು ನಟ ವಿಶಾಲ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕನ್ನಡ, ತಮಿಳು, ತೆಲಗು ಮತ್ತು ಮಲೆಯಾಳಂಗೆ ಡಬ್ ಆಗಿದ್ದು, ಹಿಂದಿಗೂ ಈ ಸಿನಿಮಾ ಡಬ್ ಆಗುತ್ತಿದ್ದು, ಡಿ.30 ರಂದು ಹಿಂದಿಯಲ್ಲಿ ಬಿಡುಗಡೆ ಆಗಲಿದೆ. ಒಬ್ಬ ಕಾನ್ಸ್ ಟೇಬಲ್‌ನ ದೃಷ್ಟಿಕೋನದಿಂದ ಈ ಚಿತ್ರ ಮಾಡಲಾಗಿದೆ ಎಂದು ತಿಳಿಸಿದರು.