Pushpa Twitter Review: ಅಲ್ಲು ಅರ್ಜುನ್​, ರಶ್ಮಿಕಾ ಚಿತ್ರ ಹಲವರಿಗೆ ಇಷ್ಟವಾಯ್ತು, ಕೆಲವರಿಗೆ ಕಷ್ಟವಾಯ್ತು

Pushpa Twitter Review: ಅಲ್ಲು ಅರ್ಜುನ್​, ರಶ್ಮಿಕಾ ಚಿತ್ರ ಹಲವರಿಗೆ ಇಷ್ಟವಾಯ್ತು, ಕೆಲವರಿಗೆ ಕಷ್ಟವಾಯ್ತು
Pushpa Movie Review: ಅನೇಕ ಕಾರಣಗಳಿಂದ 'ಪುಷ್ಪ' ಚಿತ್ರದ ಕ್ರೇಜ್​ ಹೆಚ್ಚಿತ್ತು. ಈಗ ಸಿನಿಮಾ ನೋಡಿಬಂದವರು ಟ್ವಿಟರ್​ ಮೂಲಕ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ.

ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿರುವ 'ಪುಷ್ಪ' ಸಿನಿಮಾ ಇಂದು (ಡಿ.17) ಅದ್ದೂರಿಯಾಗಿ ತೆರೆಕಂಡಿದೆ.

ಅನೇಕ ಕಡೆಗಳಲ್ಲಿ ಮುಂಜಾನೆಯೇ ಶೋ ಆರಂಭ ಆಗಿದೆ. ತೆಲುಗಿನಲ್ಲಿ ತಯಾರಾದ ಈ ಸಿನಿಮಾ ಕನ್ನಡ, ಮಲಯಾಳಂ, ಹಿಂದಿ ಮತ್ತು ತಮಿಳು ಭಾಷೆಗೂ ಡಬ್​ ಆಗಿ ಬಿಡುಗಡೆ ಆಗಿದೆ. ನಿರ್ದೇಶಕ ಸುಕುಮಾರ್​ ಅವರ ಬತ್ತಳಿಕೆಯಿಂದ ಬಂದ ಬಹುನಿರೀಕ್ಷಿತ ಸಿನಿಮಾ ಇದು. ಡಾಲಿ ಧನಂಜಯ, ಫಹಾದ್​ ಫಾಸಿಲ್ ಸೇರಿದಂತೆ ಅನೇಕ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸಮಂತಾ ಕಾಣಿಸಿಕೊಂಡಿರುವ 'ಹು ಅಂತಿಮಾ ಮಾವ, ಊಹು ಅಂತಿಯಾ ಮಾವ..' ಹಾಡಿನಿಂದ 'ಪುಷ್ಪ' ಚಿತ್ರದ ಕ್ರೇಜ್​ ಹೆಚ್ಚಿತ್ತು. ಈಗ ಸಿನಿಮಾ ನೋಡಿಬಂದವರು ಟ್ವಿಟರ್​ ಮೂಲಕ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಡಿಫರೆಂಟ್​ ಗೆಟಪ್​ನಲ್ಲಿ ಅಲ್ಲು ಅರ್ಜುನ್​ ಕಾಣಿಸಿಕೊಂಡಿದ್ದಾರೆ. ತುಂಬ ಮಾಸ್​ ಆಗಿ ಸಿನಿಮಾ ಮೂಡಿಬಂದಿದೆ. ರಶ್ಮಿಕಾ ಪಾತ್ರ ಕೂಡ ಭಿನ್ನವಾಗಿದೆ. ಕೆಲವರು ಈ ಚಿತ್ರವನ್ನು ಹಾಡಿ ಹೊಗಳುತ್ತಿದ್ದಾರೆ. ಇನ್ನೂ ಕೆಲವರು ಇದೊಂದು ಸಾಮಾನ್ಯ ಸಿನಿಮಾ ಎಂದು ಹೇಳುತ್ತಿದ್ದಾರೆ. ಟ್ವಿಟರ್​ನಲ್ಲಿ ಎಲ್ಲ ಬಗೆಯ ಪ್ರತಿಕ್ರಿಯೆಗಳು ಸಿಗುತ್ತಿವೆ.