ಟ್ರಕ್‍ಗಳು ದೆಹಲಿ ಪ್ರವೇಶಿಸದಂತೆ ಯುಪಿ-ಹರಿಯಾಣ ಸರ್ಕಾರಗಳಿಗೆ ಮನವಿ

ಟ್ರಕ್‍ಗಳು ದೆಹಲಿ ಪ್ರವೇಶಿಸದಂತೆ ಯುಪಿ-ಹರಿಯಾಣ ಸರ್ಕಾರಗಳಿಗೆ ಮನವಿ

ವದೆಹಲಿ,ನ.5-ಉತ್ತರಪ್ರದೇಶ ಮತ್ತು ಹರಿಯಾಣ ರಾಜ್ಯಗಳಿಂದ ಪ್ರಯಾಣಿಸುವ ಟ್ರಕ್‍ಗಳನ್ನು ದೆಹಲಿ ಹೊರತುಪಡಿಸಿ ಹೊರವರ್ತುಲ ರಸ್ತೆ ಮೂಲಕ ಹಾದುಹೋಗಲು ಕ್ರಮ ಕೈಗೊಳ್ಳುವಂತೆ ದೆಹಲಿ ಸರ್ಕಾರ ಮನವಿ ಮಾಡಿದೆ.

ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಕಟರ್ ಅವರಿಗೆ ಪತ್ರ ಬರೆದಿದ್ದು, ನಿಮ್ಮ ರಾಜ್ಯಗಳಿಂದ ಪ್ರಯಾಣಿಸುವ ಟ್ರಕ್‍ಗಳನ್ನು ಅಗತ್ಯ ಸೇವೆಗಳಲ್ಲದ ಹೊರತು ದೆಹಲಿ ಪ್ರವೇಶಿಸಲು ಅವಕಾಶ ನೀಡಬೇಡಿ, ಪೆರಿಪರಲ್ ಎಕ್ಸ್‍ಪ್ರೆಸ್ ವೇ ಅಥವಾ ಬದಲಿ ಮಾರ್ಗಗಳ ಮೂಲಕ ಪ್ರಯಾಣ ಮುಂದುವರೆಸಲು ಸೂಚನೆ ನೀಡಿ ಎಂದು ಮನವಿ ಮಾಡಿದ್ದಾರೆ.

ಟ್ರಕ್‍ಗಳ ಪ್ರಯಾಣದಿಂದ ದೆಹಲಿಯಲ್ಲಿ ಟ್ರಾಫಿಕ್‍ಜಾಮ್ ಹೆಚ್ಚಾಗುವುದರ ಜೊತೆಗೆ ಪರಿಸರ ಹಾನಿಯೂ ಆಗುತ್ತದೆ. ಇದನ್ನು ತಡೆಗಟ್ಟಲು ಗಡಿಭಾಗದ ರಾಜ್ಯಗಳ ಸಹಕಾರ ಅಗತ್ಯವೆಂದು ಮನವಿ ಮಾಡಿದ್ದಾರೆ.

ದೀಪಾವಳಿ ನಂತರ ದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರವಾಗಿ ಹದಗೆಟ್ಟಿದೆ. ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳಲ್ಲಿ ಕಬ್ಬಿನ ಬೆಳೆಯ ಒಣಗಿದ ತಾಜ್ಯಕ್ಕೆ ಬೆಂಕಿ ಹಚ್ಚಿದ್ದರಿಂದ ಮತ್ತಷ್ಟು ಹೊಗೆ ತುಂಬಿಕೊಂಡಿದ್ದು, ದೆಹಲಿಯಲ್ಲಿ ಉಸಿರಾಡಲು ಸಮಸ್ಯೆಯಾಗುತ್ತಿದೆ.

ವಾಯುಮಾಲಿನ್ಯ ಸೂಚ್ಯಂಕ(ಎಕ್ಯೂಐ) ನಿನ್ನೆ 447ರಷ್ಟಿದ್ದದ್ದು ಇಂದು ಅದು 450ರಷ್ಟಾಗಿದೆ. ವಾಯುಮಾಲಿನ್ಯ ಕೆಸರೆರಾಚಾಟಕ್ಕೂ ಕಾರಣವಾಗಿದೆ. ಬಿಜೆಪಿ ನಾಯಕರ ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಅವರು ಚುನಾವಣಾ ಪ್ರಚಾರದಲ್ಲಿ ಬ್ಯಿಸಿಯಾಗಿದ್ದಾರೆ.

ದೆಹಲಿಯ ನಾಗರಿಕರು ಮುಂದಿನ ಚುನಾವಣೆಯಲ್ಲಿ ಅಮ್ ಆದ್ಮಿಗೆ ಮತ ಹಾಕಿದ ಪರಿಣಾಮ ಕುಡಿಯಲು ನೀರಿಲ್ಲ, ವಿದ್ಯುತ್ ಇಲ್ಲ, ವಾಯುಮಾಲಿನ್ಯದಂತಹ ಸಮಸ್ಯೆಗಳನ್ನು ಅನುಭವಿಸಬೇಕಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ದೆಹಲಿ ಸರ್ಕಾರ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಶಾಲಾಕಾಲೇಜುಗಳಿಗೆ ರಜೆ ನೀಡಲಾಗಿದೆ. ಖಾಸಗಿ ಸಂಸ್ಥೆಗಳು ಶೇ.50ರಷ್ಟು ಸಿಬ್ಬಂದಿಗಳಿಗೆ ವರ್ಕ್ ಫ್ರಂ ನೀಡುವಂತೆ ಸೂಚಿಸಲಾಗಿದೆ. ಆದರೂ ದೆಹಲಿಯ ಮಾಲಿನ್ಯ ಪ್ರಮಾಣ ಈಗಲೂ ಗಮಭೀರ ಪರಿಸ್ಥಿತಿಯಲ್ಲಿದೆ.