ಕಟ್ಟಡದಿಂದ ಬದಲಾವಣೆಯಾಗದು; ಕೆಲಸಗಾರರ ಮನೋಭಾವನೆ ಬದಲಾಗಲಿ | Shiggaon |
ಪುರಸಭೆ ಹೊಸ ಕಟ್ಟಡದ ಮೂಲಕ ಹೊಸತನ ಬಂದಿದೆ ಆದರೆ ಕೇವಲ ಕಟ್ಟಡದಿಂದ ಬದಲಾವಣೆಯಾಗದು. ಕಟ್ಟಡದಲ್ಲಿ ಕುಳಿತು ಕೆಲಸ ಮಾಡುವವರ ಮನೋಭಾವ ಬದಲಾಗಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಶಿಗ್ಗಾಂವಿಯಲ್ಲಿ ಪುರಸಭೆ ನೂತನ ಕಟ್ಟಡವನ್ನು ಸಿಎಂ ಬಸವರಾಜ ಬೊಮ್ಮಾಯಿ ಬುಧವಾರ ಉದ್ಘಾಟಿಸಿ ಮಾತನಾಡಿ, ಯೋಜನೆ ಪ್ರಾಧಿಕಾರದ ಭರವಸೆ ನೀಡಿದರು. ಈ ಸಂರ‍್ಭದಲ್ಲಿ ಬಸವರಾಜ ಹೊರಟ್ಟಿ, ಮಂಜುನಾಥ ಕುನ್ನೂರ, ಸಿ.ಸಿ.ಪಾಟೀಲ, ವೀರುಪಾಕ್ಷಪ್ಪ ಬಳ್ಳಾರಿ, ಪುರಸಭೆ ಅಧ್ಯಕ್ಷ ಶ್ರೀ ಕಾಂತ ಬುಳ್ಳಕ್ಕನವರ, ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ರಮೇಶ ವನಹಳ್ಳಿ, ಸಿದ್ಧರ‍್ಥಗೌಡ ಪಾಟೀಲ,ದಯಾನಂದ ಅಕ್ಕಿ ಸುಭಾಷ್ ಚೌಹಾನ್ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ರ‍್ವ ಸದಸ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.