ವಿದೇಶಿ ಮಾಧ್ಯಮಗಳ ಮೂಲಕ ಭಾರತ ಟೀಕೆ ರಾಹುಲ್‌ಗೆ ಹವ್ಯಾಸ: ಕೇಂದ್ರ ಸಚಿವ ಠಾಕೂರ್

ನವದೆಹಲಿ: ವಿದೇಶಿ ಮಾಧ್ಯಮಗಳನ್ನು ಬಳಸಿಕೊಂಡು ಭಾರತವನ್ನು ದೂಷಿಸುವುದು ರಾಹುಲ್ ಗಾಂಧಿ ಅವರಿಗೆ ಅಭ್ಯಾಸವಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಪೆಗಾಸಸ್ ಬೇಹುಗಾರಿಕಾ ತಂತ್ರಾಂಶ ಕುರಿತು ಕೇಂಬ್ರಿಜ್ ವಿವಿ ಉಪನ್ಯಾಸದಲ್ಲಿ ರಾಹುಲ್ ಗಾಂಧಿ ಪ್ರಸ್ತಾಪಿಸಿರುವ ಕುರಿತು ಸಚಿವ ಅನುರಾಗ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ನಾಯಕ (ಗಾಂಧಿ) ಭಾರತದ ಕುರಿತು ಹೊರದೇಶಗಳಲ್ಲಿ ದೂಷಣೆ ಮಾಡುತ್ತಾರೆ. ಅವರು ಪೆಗಾಸಸ್ ತನಿಖೆಗೆ ಸಂಬಂಧಿಸಿದಂತೆ ಏಕೆ ಫೋನ್‌ಗಳನ್ನು ಸಲ್ಲಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇಟಲಿ ಪ್ರಧಾನಿ ಅವರು ನರೇಂದ್ರ ಮೋದಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, ನರೇಂದ್ರ ಮೋದಿ ಪ್ರಪಂಚದಾದ್ಯಂತ ಪ್ರೀತಿ ಪಡೆದಿದ್ದಾರೆ ಎಂಬ ಮಾತು ಗಾಂಧಿ ಕುಟುಂಬಕ್ಕೆ ಸಹಿಸಲು ಅಸಾಧ್ಯವಾಗುತ್ತಿದೆ ಎಂದು ಕುಟುಕಿದರು.