ಕಲಬುರ್ಗಿಯಲ್ಲಿ ಗೂಂಡಾ ಕಾಯ್ದೆ ಅಸ್ತ್ರ ಪ್ರಯೋಗ; ಕುಖ್ಯಾತ ರೌಡಿ ಖಾಕಿ ವಶಕ್ಕೆ
ಕಲಬುರ್ಗಿ: ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳ ತಡೆಗೆ ಗೂಂಡಾ ಕಾಯ್ದೆ ಅಸ್ತ್ರ ಪ್ರಯೋಗಿಸಲಾಗಿದೆ. ಕುಖ್ಯಾತ ರೌಡಿ ಸೈಯದ್ ಆದೀಲ್ ವಿರುದ್ದ ಗೂಂಡಾ ಕಾಯ್ದೆಯಡಿ ಕೇಸ್ ದಾಖಲಾಗಿದ್ದು, ಸೈಯದ್ ಅನ್ನು ಬಂಧಿಸಿ ಬೆಳಗಾವಿ ಜೈಲಿಗೆ ಕಳಿಸುವಂತ ಕಲಬುರ್ಗಿ ನಗರ ಪೊಲೀಸ್ ಕಮಿಷನರ್ ಡಾ.ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ಕಲಬುರ್ಗಿಯ ವಿದ್ಯಾನಗರದ ನಿವಾಸಿಯಾಗಿರುವ ರೌಡಿ ಆದೀಲ್ ವಿರುದ್ದ ಹಲವು ಪ್ರಕರಣಗಳು ದಾಖಲಾಗಿವೆ. ಕಲಬುರ್ಗಿಯ ಅಶೋಕ ನಗರ ಠಾಣೆಯಲ್ಲೂ ಹಲವು ಕೇಸ್ ದಾಖಲಾಗಿದ್ದವು.