2019ರ ಕೇಸ್ ರೀ ಓಪನ್ ಹಿನ್ನೆಲೆ; ನಟ ದುನಿಯಾ ವಿಜಯ್ಗೆ ನೋಟಿಸ್
ಬೆಂಗಳೂರು: 2019ರಲ್ಲಿ ದಾಖಲಾಗಿದ್ದ ಕೇಸ್ ರೀ ಓಪನ್ ಹಿನ್ನೆಲೆ ನಟ ದುನಿಯಾ ವಿಜಯ್ಗೆ ನೋಟಿಸ್ ನೀಡಲಾಗಿದೆ. ಹೈಗ್ರೌಂಡ್ಸ್ ಠಾಣೆ ಪೊಲೀಸರಿಂದ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ತಿಳಿಸಿದ್ದಾರೆ. ದುನಿಯಾ ವಿಜಿ ಪಾನಿ ಪುರಿ ಕಿಟ್ಟಿ ವಿರುದ್ದ ಕೇಸ್ ದಾಖಲು ಮಾಡಿದ್ದು, ಹೈಕೋರ್ಟ್ ಮೊರೆ ಹೋಗಿ ಕೇಸ್ ದಾಖಲಿಸುವ ಆದೇಶ ತಂದಿದ್ದರು. ಕಿಟ್ಟಿ ಹೇಳಿಕೆ ಬಳಿಕ ದೂರುದಾರ, ವಿಜಯ್ಗೆ ನೋಟಿಸ್ ನೀಡಿದ್ದು, ವಿಜಯ್ ನೋಟಿಸ್ಗೆ ಉತ್ತರಿಸಲು ಕಾಲಾವಕಾಶ ಕೇಳಿದ್ದಾರೆ.