ಕನುಗೋಲು ಕೋಲಾರ ಸಮೀಕ್ಷೆ ಮೇಲೆ ಸಂಶಯ: ಜೆಡಿಎಸ್ ಆಮಿಷದಿಂದ ತಪ್ಪು ವರದಿ ಆರೋಪ
ಕೋಲಾರ: ಸಮೀಕ್ಷೆ ನಡೆಸಲು ಬಂದಿದ್ದ ಆಂಧ್ರಪ್ರದೇಶದ ಖಾಸಗಿ ಏಜೆನ್ಸಿಯ ಸುನಿಲ್ ಕನುಗೋಲು ಎಂಬುವರು ಕೋಲಾರ ನಗರ ಹೊರವಲಯದ ನಾಗಾರ್ಜುನ್ ಹೋಟೆಲ್‍ನಲ್ಲಿ ತಂಗಿದ್ದರು. ಅದರ ಮಾಲೀಕ ಜೆಡಿಎಸ್ ಪಕ್ಷದವರು. ಆಮಿಷಕ್ಕೆ ಒಳಗಾಗಿ ರಾಹುಲ್ ಗಾಂಧಿ ಅವರಿಗೆ ತಪ್ಪುಮಾಹಿತಿ ನೀಡಿರಬಹುದು ಎಂದು ಅಹಿಂದ ಮುಖಂಡರು ಆರೋಪಿಸಿದರು.
'ಸುನಿಲ್ ಕನುಗೋಲು ಸಮೀಕ್ಷೆ ಬಗ್ಗೆ ಅನುಮಾನವಿದೆ. ಸಮೀಕ್ಷೆ ವೇಳೆ ಗ್ರಾಮಾಂತರದಲ್ಲಿ ಪಕ್ಷದ ಸಂಘಟನೆ ನಡೆದಿರಲಿಲ್ಲ. ಅವರು ಈಗ ಬಂದು ಸಮೀಕ್ಷೆ ಮಾಡಬೇಕಿತ್ತು' ಎಂದು ನಗರಸಭೆ ಸದಸ್ಯ ಅಂಬರೀಷ್ ಹೇಳಿದರು.