ನನ್ನನ್ನು ಹೊಡೆಯಲು ಬಿಡುತ್ತೀರಾ?: ಅಶ್ವತ್ಥನಾರಾಯಣ ವಿರುದ್ಧ ಸಿದ್ದರಾಮಯ್ಯ ಕಿಡಿ

ನನ್ನನ್ನು ಹೊಡೆಯಲು ಬಿಡುತ್ತೀರಾ?: ಅಶ್ವತ್ಥನಾರಾಯಣ ವಿರುದ್ಧ ಸಿದ್ದರಾಮಯ್ಯ ಕಿಡಿ

ಬಾಗಲಕೋಟೆ: 'ನಾನು ಮನುಷ್ಯತ್ವ ಇರುವವನು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬುದ್ಧ ಸೇರಿದಂತೆ ಎಲ್ಲ ಧರ್ಮದವರನ್ನೂ ಪ್ರೀತಿಸುತ್ತೇನೆ' ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಜಿಲ್ಲೆಯ ಕಲಾದಗಿಯಲ್ಲಿ ಗುರುವಾರ ನಡೆದ 'ಪ್ರಜಾಧ್ವನಿ' ಯಾತ್ರೆಯ ಸಮಾವೇಶದ ಅಂತ್ಯದಲ್ಲಿ ಭಾವುಕರಾಗಿ ಮಾತನಾಡಿದ ಅವರು, 'ಮಂಡ್ಯದಲ್ಲಿ ಸಚಿವ ಅಶ್ವತ್ಥನಾರಾಯಣ, ಸಿದ್ದರಾಮಯ್ಯನನ್ನು ಟಿಪ್ಪು ರೀತಿ ಹೊಡೆದು ಹಾಕಬೇಕು ಎಂದಿದ್ದಾರೆ.

ನನ್ನನ್ನು ಹೊಡೆಯಲು ಬಿಡುತ್ತೀರಾ?' ಎಂದು ಜನರನ್ನು ಪ್ರಶ್ನಿಸಿದರು.

'ಇಲ್ಲ' ಎಂಬ ಕೂಗು ಜನರಿಂದ ಮಾರ್ದನಿಸಿತು.

'ಟಿಪ್ಪು ಸುಲ್ತಾನ್, ಸೇವಾಲಾಲ್‌, ಸಂಗೊಳ್ಳಿ ರಾಯಣ್ಣ, ಚನ್ನಮ್ಮ, ಬಸವಣ್ಣ ಸೇರಿದಂತೆ ಎಲ್ಲರನ್ನೂ ನಾನು ಗೌರವಿಸುತ್ತೇನೆ. ಬಸವಣ್ಣನವರ ಭಾವಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಿ ಹಾಕಬೇಕು ಎಂದು ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಆದೇಶ ಮಾಡಿದ್ದೆ' ಎಂದು ಹೇಳಿದರು.