ಮಗನನ್ನ ಹುಡ್ಕೊಂಡು ಬಂದ ಅಪ್ರಾಪ್ತೆ ಪ್ರಿಯತಮೆ ಮೇಲೆ ತಂದೆಯಿಂದಲೇ ರೇಪ್

ಮಗನನ್ನ ಹುಡ್ಕೊಂಡು ಬಂದ ಅಪ್ರಾಪ್ತೆ ಪ್ರಿಯತಮೆ ಮೇಲೆ ತಂದೆಯಿಂದಲೇ ರೇಪ್
ಚಿಕ್ಕಮಗಳೂರು: ಪುತ್ರನ ಅಪ್ರಾಪ್ತೆ (Minor Girl) ಮೇಲೆ ತಂದೆಯೇ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಚಿಕ್ಕಮಗಳೂರು (Chikkamagaluru) ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು (Balehonnuru) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಪೊಲೀಸರು (Police) ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಸಂತ್ರಸ್ತೆ 10ನೇ ಕ್ಲಾಸ್ ಓದುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಬಾಲಕಿ (Girl) ಪ್ರಿಯತಮನನ್ನು (Boy Friend) ಹುಡುಕಿಕೊಂಡು ಮನೆಗೆ ಬಂದಿದ್ದಾಳೆ. ಈ ವೇಳೆ ಪ್ರಿಯಕರ ಕೆಲಸದ ನಿಮಿತ್ ಹೊರಗೆ ಹೋಗಿದ್ದನು. ಆದ್ರೆ ಮಗ ಮನೆಯಲ್ಲಿ ಇಲ್ಲ ಎಂದು ಹೇಳಿ ಕಳಿಸದ ನೀಚ, ಸಂಚು ರೂಪಿಸಿದ್ದನು.

ಬಲವಂತವಾಗಿ ಬಾಲಕಿಯನ್ನು ಮನೆಯಲ್ಲಿ ಉಳಿಸಿಕೊಂಡ

ಮಗ ಮನೆಯಲ್ಲಿ ಇಲ್ಲ. ಸಂಜೆ ಆತ ಮರಳಿ ಬರಲಿದ್ದಾನೆ ಎಂದು ಬಾಲಕಿಯನ್ನು ಮನೆಯಲ್ಲಿಯೇ ಉಳಿಸಿಕೊಂಡಿದ್ದಾನೆ. ಮಗ ಬಂದೇ ಬರುತ್ತಾನೆ ಎಂದು ಬಲವಂತವಾಗಿ ಬಾಲಕಿಯನ್ನು ಮನೆಯಲ್ಲಿಯೇ ಉಳಿಸಿಕೊಂಡಿದ್ದಾನೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಬಾಲಕಿ ಮೇಲೆ ಯುವಕನ ತಂದೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ತಾಯಿ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಬಾಲಕಿ ಪೋಷಕರ ಜೊತೆಯಲ್ಲಿದ್ದಾಳೆ.

ನನ್ನ ಮಗಳು ಶಾಲೆಗೆ ಹೋಗದೇ ಬೇರೆಯೊಬ್ಬರ ಮನೆಯಲ್ಲಿರುವ ವಿಷಯ ತಿಳಿಯಿತು. ನಾನೇ ಹೋಗಿಯನ್ನು ಕರೆದುಕೊಂಡು ಬಂದಾಗ ಮಗಳು ತನ್ನ ಮೇಲೆ ನಡೆದ ಅತ್ಯಾಚಾರ ತಿಳಿಸಿದಳು. ಆಕೆಗೆ ಪರೀಕ್ಷೆಗಳಿದ್ದ ಕಾರಣ, ವಿಷಯವನ್ನು ಯಾರಿಗೂ ಹೇಳಲಿಲ್ಲ. ನಂತರ ಸಂಬಂಧಿಕರ ಜೊತೆ ಚರ್ಚೆ ನಡೆಸಿ ದೂರು ದಾಖಲಿಸಿರೋದಾಗಿ ಸಂತ್ರಸ್ತೆ ತಾಯಿ ಹೇಳಿದ್ದಾರೆ.