ಕಡಲ ಕೊರೆತದಿಂದ ಮನೆ ಕಳೆದುಕೊಂಡವರಿಗೆ 1 ಲಕ್ಷ ರೂ‌. ಪರಿಹಾರ : ಅಶೋಕ್ ಸೂಚನೆ

ಕುಂದಾಪುರ : ಕಡಲ ಕೊರೆತದಿಂದ ಹಾನಿಯಾದ ಮರವಂತೆ ಪ್ರದೇಶಕ್ಕೆ ಕಂದಾಯ ಸಚಿವ ಆ‌ರ್.‌ ಅಶೋಕ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕಡಲ ಕೊರೆತದಿಂದ ಹಾನಿಯಾದ ಸಂತ್ರಸ್ತರಿಗೆ ಕೂಡಲೇ ತುರ್ತು ಪರಿಹಾರರನ್ನು ನೀಡುವಂತೆ ಡಿಸಿಯವರಿಗೆ ಸೂಚನೆ ನೀಡಿದ್ದಾರೆ. ಸಂಪೂರ್ಣ ಹಾನಿಯಾದ ಮನೆಯವರಿಗೆ ತಲಾ 1 ಲಕ್ಷ ರೂ‌. ಪರಿಹಾರ ನೀಡುವಂತೆ ಆರ್ ಆಶೋಕ್ ಸೂಚನೆ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಲಾಕ್ ಡೌನ್ ಜಾರಿಯಾಗಿದ್ದರಿಂದ ಕೋವಿಡ್ ಪ್ರಕರಣ ಇಳಿಮುಖವಾಗಿದೆ..ಹಾಗಾಗಿ ಲಾಕ್ ಡೌನ್ ಮುಂದುವರಿಕೆಗೆ ತಜ್ಞರು ಸಲಹೆ ನೀಡಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಿಸಿ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಕಡಲ ಕೊರೆತದಿಂದ ಮನೆ ಕಳೆದುಕೊಂಡವರಿಗೆ 1 ಲಕ್ಷ ರೂ‌. ಪರಿಹಾರ : ಅಶೋಕ್ ಸೂಚನೆ