ಒಂದು ತಿಂಗಳು ಲಾಕ್ ಡೌನ್ ಅನಿವಾರ್ಯ: ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು, ಮೇ 18-ಕೋವಿಡ್ -19ರ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಒಂದು ತಿಂಗಳು ರಾಜ್ಯದಲ್ಲಿ ಲಾಕ್ ಡೌನ್ ಮಾಡುವುದು ಅನಿವಾರ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ 15ರಂತೆ ಲಾಕ್ ಡೌನ್ ಗೆ ಒತ್ತಾಯ ಮಾಡಿದ್ದೆ. ಆಗ ಲಾಕ್ ಡೌನ್ ಮಾಡಿದ್ದರೆ ಇಷ್ಟೊಂದು ಅನಾಹುತ ಆಗುತ್ತಿರಲಿಲ್ಲ ಎಂದರು. ಕೋವಿಡ್ ಪರೀಕ್ಷೆ ಮಾಡುವುದನ್ನು ಕಡಿಮೆ ಮಾಡಲಾಗಿದೆ. ಇದರಿಂದ ಸೋಂಕು ಹೆಚ್ಚಳವಾಗುವುದಿಲ್ಲದೆ, ಸಾವುಗಳು ಸಂಭವಿಸುವ ಅಪಾಯವಿದೆ. ಇಲ್ಲಿಯವರೆಗೆ ಸರ್ಕಾರ ತಪ್ಪು ಮಾಡಿದ್ದಾಯಿತು ಇನ್ನಾದರೂ ತಜ್ಞರು ನೀಡುವ ಸಲಹೆಯನ್ನು ಆದರಿಸಿ ಸೋಂಕು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು‌ ಮೇಲಿಂದ ಮೇಲೆ ಅಧಿಕಾರಿಗಳ ಸಭೆಗಳನ್ನು ನಡೆಸುವುದರಿಂದ ಪ್ರಯೋಜನವಿಲ್ಲ. ಫೀಲ್ಡಿಗಿಳಿದು ಸಚಿವರು ಕೆಲಸ ಮಾಡಬೇಕು ಎಂದರು‌. ತಾವು ಕೊಟ್ಟಂತಹ ಗುಣಾತ್ಮಕ ಸಲಹೆಗಳನ್ನು ಸರ್ಕಾರ ಅನುಷ್ಠಾನ ಮಾಡಿದ್ದರೆ, ಸಾಕಷ್ಟು ಪರಿಹಾರ ದೊರೆಯುತ್ತಿತ್ತು. ಆದರೆ ಸಲಹೆಗಳಿಗೆ ಸರ್ಕಾರದಲ್ಲಿ ಮನ್ನಣೆ ದೊರೆಯಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು‌ ಸರ್ಕಾರದ ಆಡಳಿತ ವೈಖರಿಯ ಬಗ್ಗೆ ಸಚಿವ ಮಾಧುಸ್ವಾಮಿ ಅವರು ನೀಡಿರುವ ಹೇಳಿಕೆಯನ್ನು ಗಮನಿಸಬಹುದು‌. ವೈಫಲ್ಯವನ್ನು ಮುಚ್ಚಿಕೊಳ್ಳಲು ಕೋವಿಡ್ ಪಾಸಿಟಿವ್ ಸಂಖ್ಯೆ ಕಡಿಮೆ ತೋರಿಸಲಾಗುತ್ತಿದೆ. ಕೋವಿಡ್ ಸರಪಳಿ ಕಟ್ಟು ಮಾಡದಿದ್ದರೆ, ಮುಂದೆ ದೊಡ್ಡ ಮಟ್ಟದ ಸಾವು-ನೋವು ಸಂಭವಿಸಬಹುದು‌. ಈಗಲೇ ಔಷದಿ, ಹಾಸಿಗೆ, ಆಮ್ಲಜನಕದ ಸಮಸ್ಯೆ ಇದೆ. ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ನಿನ್ನೆಯಿಂದ ಜಿಲ್ಲಾವಾರು ನಮ್ಮ ಶಾಸಕರೊಂದಿಗೆ ವರ್ಚುವಲ್ ಸಭೆ ನಡೆಸಿ ಮಾಹಿತಿ ಪಡಯುತ್ತಿದ್ದೇನೆ. ಒಂದು ಸಾವಿರ ಹಾಸಿಗೆ ಸಾಮರ್ಥ್ಯದ ರಾಮನಗರ ಜಲ್ಲಾಸ್ಪತ್ರೆ ಪೂರ್ಣಗೊಳಿಸಿದ್ದರೆ 500 ಜನರಿಗೆ ಚಿಕಿತ್ಸೆ ನೀಡಬಹುದಿತ್ತು. ಕೋವಿಡ್ ಲಸಿಕೆ ಬಂದ ಆರಂಭದಲ್ಲಿ ಕಾಂಗ್ರೆಸ್ ನವರು ಅಪಪ್ರಚಾರ ಮಾಡಿದರು. ಈಗ ಕೋವಿಡ್ ವಿಚಾರದಲ್ಲಿ ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಶಾಸಕರ, ಸಂಸದರ ನಿಧಿ ಹಣವನ್ನು ಸಂಗ್ರಹಿಸಿ ಸರ್ಕಾರಕ್ಕೆ ಲಸಿಕೆಗಾಗಿ ನೂರು ಕೋಟಿ ರೂ. ಕೊಡುತ್ತಿದ್ದಾರೆ ಎಂದು ಅವರು ಹೇಳಿದರು. ಪ್ರಮುಖ ನಾಯಕರೊಂದಿಗೆ ವಿಡಿಯೋ ಸಂವಾದ: ಬೆಂಗಳೂರು, ಮೇ 18-ಕೋವಿಡ್ 19 ಪರಿಸ್ಥಿತಿಯ ಬಗ್ಗೆ ಮಾಜಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ತುಮಕೂರು ಜಿಲ್ಲೆ ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಪ್ರಮುಖ ನಾಯಕರೊಂದಿಗೆ ವಿಡಿಯೋ ಸಂವಾದ ನಡೆಸಿದರು. ಕೋವಿಡ್ 19 ಆರೈಕೆ ಕೇಂದ್ರಗಳ ನಿರ್ವಹಣೆಗೆ ಸಿಬ್ಬಂದಿ ಕೊರತೆ ಇದೆ ಎಂಬುದನ್ನು ತುಮಕೂರು ಜಿಲ್ಲಾ ಜೆಡಿಎಸ್ ಜನಪ್ರತಿನಿಧಿಗಳು ಕುಮಾರಸ್ವಾಮಿ ಅವರ ಗಮನಸೆಳೆದರು. ಈ ಸಂಬಂಧ ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಡ ತರುವುದಾಗಿ ಕುಮಾರಸ್ವಾಮಿ ತಿಳಿಸಿದರು ನಿನ್ನೆ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಕೋವಿಡ್19 ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿದ್ದರು. ಇಂದು ತುಮಕೂರು ಜಿಲ್ಲೆಯ ಪಕ್ಷದ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ ವಾಸ್ತವ ಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.

ಒಂದು ತಿಂಗಳು ಲಾಕ್ ಡೌನ್ ಅನಿವಾರ್ಯ: ಎಚ್ ಡಿ ಕುಮಾರಸ್ವಾಮಿ