ಮೋದಿ' ಆಗಮನದ ಬೆನ್ನಲ್ಲೇ ಮಹಿಳೆಯರಿಗೆ 500 ರೂ.ನೋಟು ಹಂಚಿ ವಿವಾದಕ್ಕೆ ಸಿಲುಕಿದ ರೇಣುಕಾಚಾರ್ಯ

ಮೋದಿ' ಆಗಮನದ ಬೆನ್ನಲ್ಲೇ ಮಹಿಳೆಯರಿಗೆ 500 ರೂ.ನೋಟು ಹಂಚಿ ವಿವಾದಕ್ಕೆ ಸಿಲುಕಿದ ರೇಣುಕಾಚಾರ್ಯ

ದಾವಣಗೆರೆ : ವಿಧಾನಸಭೆ ಚುನಾವಣೆ ಬೆನ್ನಲ್ಲೇ , ರಾಜ್ಯಕ್ಕೆ ಇಂದು ಪ್ರಧಾನಿ ಮೋದಿ ಆಗಮನದ ಬೆನ್ನಲ್ಲೇ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಹೊಸದೊಂದು ವಿವಾದದಲ್ಲಿ ಸಿಲುಕಿದ್ದಾರೆ.

ನಿನ್ನೆ ರೇಣುಕಾಚಾರ್ಯ ಅವರು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ವೇಳೆ ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದಲ್ಲಿ 50 ಕ್ಕೂ ಮಹಿಳೆಯರಿಗೆ ನೋಟು ಹಂಚಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.

ಗ್ರಾಮದಲ್ಲಿ 50 ಕ್ಕೂ ಹೆಚ್ಚ ಮಹಿಳೆಯರಿಗೆ ಗರಿಗರಿಯ 500 ರೂ ನೋಟು ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ. ಪ್ರಧಾನಿ ಮೋದಿ ಆಗಮನದ ಬೆನ್ನಲ್ಲೇ ವಿಧಾನಸಭೆ ಚುನಾವಣೆ ಬೆನ್ನಲ್ಲೇ , ರಾಜ್ಯಕ್ಕೆ ಇಂದು ಪ್ರಧಾನಿ ಮೋದಿ ಆಗಮನದ ಬೆನ್ನಲ್ಲೇ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಹೊಸದೊಂದು ವಿವಾದದಲ್ಲಿ ಸಿಲುಕಿದ್ದಾರೆ.