ತಮಿಳುನಾಡಿನ ಕಡಲೂರಿನಲ್ಲಿ ಸಾರಿಗೆ ಬಸ್ ಕಾಲುವೆಗೆ ಬಿದ್ದು 20 ಮಂದಿ ಗಾಯ

ತಮಿಳುನಾಡಿನ ಕಡಲೂರಿನಲ್ಲಿ ಸಾರಿಗೆ ಬಸ್ ಕಾಲುವೆಗೆ ಬಿದ್ದು 20 ಮಂದಿ ಗಾಯ

ಚೆನ್ನೈ( ತಮಿಳುನಾಡು) : ಸಾರಿಗೆ ಬಸ್ ಪಲ್ಟಿಯಾಗಿ ಕಾಲುವೆಗೆ ಬಿದ್ದ ಪರಿಣಾಮ ಸುಮಾರು 20 ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ವೃದ್ದಾಚಲಂ ಬಳಿಯ ಕೋಮಂಗಲಂನಲ್ಲಿ ನಡೆದಿದೆ.

ಚಾಲಕ ಮಿನಿವ್ಯಾನ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ಈ ದುರ್ಘಟನೆ ಸಂಭವಿಸಿದ್ದು, ಗಾಯಾಳುಗಳನ್ನು ತಕ್ಷಣವೇ ವೃದ್ದಾಚಲಂ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಅಪಘತಾಗೊಂಡ ಬಸ್ ಸೆಪ್ಪಕ್ಕುಳಂ ಗ್ರಾಮದಿಂದ ವೃದ್ದಾಚಲಂಗೆ ತೆರಳುತ್ತಿತ್ತು. ಇದಲ್ಲಿ 40 ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.

ಕಾರಿಗೆ ವಾಹನ ಡಿಕ್ಕಿ ; ಐವರು ಸಾವು

ಇದಕ್ಕೂ ಮುನ್ನ ಕಾರಿಗೆ ಹಲವು ವಾಹನಗಳು ಡಿಕ್ಕಿ ಹೊಡೆದು ಇಬ್ಬರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದರು ಘಟನೆ ಬೆಳಗ್ಗೆ ತಮಿಳುನಾಡಿನ ಕಡಲೂರು ಜಿಲ್ಲೆಯ ವೇಪ್ಪೂರ್ ಬಳಿ ನಡೆದಿದೆ.

ಸಂಚಾರ ದಟ್ಟಣೆಯಿಂದಾಗಿ ಚೆನ್ನೈ-ತಿರುಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರು ತಮಿಳುನಾಡಿನ ಕಡಲೂರು ಜಿಲ್ಲೆಯ ವೇಪ್ಪೂರ್ ಬಳಿ ಸ್ಥಗಿತಗೊಂಡಿತ್ತು. ಇದ್ದಕ್ಕಿದ್ದಂತೆ ವೇಗವಾಗಿ ಬಂದ ಲಾರಿಯೊಂದು ಹಿಂದಿನಿಂದ ಕಾರಿಗೆ ಡಿಕ್ಕಿ ಹೊಡೆದು ಭಾರಿ ಅನಾಹುತ ಸಂಭವಿಸಿದೆ ಎನ್ನಲಾಗುತ್ತಿದೆ.