ವೇದ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲೂ ಭರ್ಜರಿ ಸದ್ದು ಮಾಡಿತ್ತು. ಕನ್ನಡ, ತಮಿಳಿನಲ್ಲಿ ಭರ್ಜರಿ ಪ್ರದರ್ಶನ ಕಂಡ ವೇದ ಸಿನಿಮಾವನ್ನು ಇದೀಗ ತೆಲುಗಿನಲ್ಲೂ ಬಿಡುಗಡೆ ಮಾಡಲು ತಯಾರಿ ನಡೆದಿದೆ. ತೆಲುಗಿನಲ್ಲಿ ಸಿನಿಮಾ ಡಬ್ ಮಾಡಲಾಗುತ್ತಿದೆ. ಇದೀಗ ವೇದ ಸಿನಿಮಾದ ತೆಲುಗಿನಲ್ಲೂ ರಿಲೀಸ್ ಮಾಡಲಾಗ್ತಿದ್ದು, ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ವೇದ ಸಿನಿಮಾ ತೆಲುಗು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಇನ್ನೂ ವೇದ ತೆಲುಗು ಅವತರಣಿಕೆಯನ್ನು ಕಂಚಿ ಕಾಮಾಕ್ಷಿ ಕ್ರಿಯೇಷನ್ಸ್ ಬಿಡುಗಡೆ ಮಾಡಲಿದ್ದಾರೆ. ಶಿವರಾಜ್ ಕುಮಾರ್ 125ನೇ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ರು. ಹೋಮ್ ಪ್ರೊಡೆಕ್ಷನ್ ಮೂಲಕ ವೇದ ಸಿನಿಮಾ ನಿರ್ಮಿಸಲಾಗಿದ್ದು, ವೇದನಾಗಿ ಶಿವಣ್ಣ ತೆರೆ ಮೇಲೆ ಅಬ್ಬರಿಸಿದ್ರು. ವೇದ ಸಿನಿಮಾ ಬಗ್ಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಶಿವಣ್ಣ ಮಾಸ್ ಮೂಲಕವೇ ಹೆಣ್ಣು ಮಕ್ಕಳ ಮನಗೆದ್ದಿದ್ದಾರೆ. ವೇದ ಚಿತ್ರದ ನಾಯಕಿ ಗಾನವಿ ಲಕ್ಷ್ಮಣ್ ಹಾಗೂ ಅದಿತಿ ಸಾಗರ್ ಅಭಿನಯಕ್ಕೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ವೇದ ಸಿನಿಮಾ ಹೆಣ್ಣು ಮಕ್ಕಳ ಮೇಲೆ ನಡೆಯೋ ಕಿರುಕುಳದ ವಿರುದ್ಧ ಹೋರಾಡುವ ಸೇಡಿನ ಕಥೆಯನ್ನು ಹೊಂದಿದೆ. ಒಳ್ಳೆಯ ಕಥಾಹಂದರ ಇರುವ ವೇದ ಸಿನಿಮಾ ನೋಡಿದ ಪ್ರೇಕ್ಷಕರು, ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಿತ್ರಕ್ಕೆ ನಿರ್ದೇಶಕ ಎ.ಹರ್ಷ ನಿರ್ದೇಶಿಸಿದ್ದರು. ಶಿವಣ್ಣಗೆ ನಾಯಕಿಯಾಗಿ ಗಾನವಿ ಲಕ್ಷ್ಮಣ್ ಅಭಿನಯಿಸಿದ್ದಾರೆ. ಜೊತೆಗೆ ವೀಣಾ ಪೊನ್ನಪ್ಪ, ಶ್ವೇತಾ ಚೆಂಗಪ್ಪ, ಉಮಾಶ್ರೀ ಹಾಗೂ ಅದಿತಿ ಸಾಗರ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ರು.