'ಫಿಜಾ' ಸಿನಿಮಾ ನಿರ್ಮಾಪಕ ಪ್ರದೀಪ್ ಗುಹಾ ನಿಧನ
ಬಾಲಿವುಡ್ ನಿರ್ಮಾಪಕ ಹಾಗೂ ಹಲವು ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರಾಗಿ ಕೆಲಸ ಮಾಡಿದ್ದ ಪ್ರದೀಪ್ ಗುಹಾ ಶನಿವಾರ ತಡರಾತ್ರಿ ನಿಧನರಾಗಿದ್ದಾರೆ.
ಪ್ರದೀಪ್ ಗುಹಾ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹಲವು ದಿನಗಳಿಂದ ಅವರು ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಪ್ರದೀಪ್ ಗುಹಾ ಮೃತಪಟ್ಟಿದ್ದಾರೆ.
ಹೃತಿಕ್ ರೋಷನ್ ಮತ್ತು ಕರಿಷ್ಮಾ ಕಪೂರ್ ಅಭಿನಯದ 'ಫಿಜಾ' ಸಿನಿಮಾವನ್ನು ಪ್ರದೀಪ್ ಗುಹಾ ನಿರ್ಮಾಣ ಮಾಡಿದ್ದರು. ಬಾಂಬೆ ಟೈಮ್ಸ್ ಪತ್ರಿಕೆ ಸಂಪಾದಕರಾಗಿ, ಟೈಮ್ಸ್ ಆಫ್ ಇಂಡಿಯಾ ಗ್ರೂಪ್‌ನ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದರು.
ಪ್ರದೀಪ್ ಗುಹಾ ನಿಧನಕ್ಕೆ ಬಾಲಿವುಡ್ ಸೇರಿದಂತೆ ಮಾಧ್ಯಮ ಸಂಸ್ಥೆಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.