ಅಫ್ಘಾನ್‌ನ ಮಹಿಳೆಯರಿಗಿಲ್ಲ ವರದಿಗಾರಿಕೆಗೆ ಅವಕಾಶ
ಅಫ್ಘಾನ್ : ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಇದೀಗ ಅಫ್ಘಾನ್‌ನಲ್ಲಿ ಇರುವ ಪತ್ರಕರ್ತೆಯರ ಸಂಖ್ಯೆ 100ಕ್ಕೂ ಕಡಿಮೆ. ಈ ಹಿಂದೆ ಆಫ್ಘನ್‌ನಲ್ಲಿ 700 ಮಂದಿ ಪತ್ರಕರ್ತೆಯರು ಕಾರ್ಯನಿರ್ವಹಿಸುತ್ತಿದ್ದು, ಇದೀಗ ಕೇವಲ 100 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ.
ಮಹಿಳಾ ಪತ್ರಕರ್ತರಿಗೆ ವರದಿಗಾರಿಕೆಗೆ ಅವಕಾಶ ಇಲ್ಲ. ಮನೆಯಲ್ಲಿ ಮಾಡುವ ಕೆಲಸವಿದ್ದರೆ ಮಾತ್ರ ಮಾಡಬಹುದು. ಹೊರಗೆ ಬಂದರೆ ಹಲ್ಲೆ ಮಾಡುತ್ತೇವೆ ಎಂದು ತಾಲಿಬಾನ್ ಎಚ್ಚರಿಸಿದೆ. ಈ ಕಾರಣದಿಂದಲೂ ಪತ್ರಕರ್ತೆಯರ ಸಂಖ್ಯೆ ಕಡಿಮೆಯಾಗಿದೆ. ಕಳೆದ ವರ್ಷದ ಮಾಹಿತಿ ಅನ್ವಯ ಕಾಬೂಲ್‌ನಲ್ಲಿ 108 ಮಾಧ್ಯಮಗಳು ಕೆಲಸ ಮಾಡುತ್ತಿದ್ದವು. ಇದರಲ್ಲಿ 1,080 ಮಹಿಳೆಯರು ಇದ್ದರು.
2020ರಲ್ಲಿ ದೇಶದ 8 ಅತಿದೊಡ್ಡ ಮಾಧ್ಯಮ ಸಮೂಹಗಳಿಂದ ನೇಮಕಗೊಂಡ 510 ಮಹಿಳೆಯರಲ್ಲಿ ಇದೀಗ 39 ಪತ್ರಕರ್ತರು ಸೇರಿದಂತೆ 79 ಮಹಿಳೆಯರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಿಂದ ಮಹಿಳೆಯರು ಕಣ್ಮರೆಯಾಗುತ್ತಿರುವುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ.